ಪಂಜಾಬ್ ಚುನಾವಣಾ ದಿನಾಂಕ ಮೂಂದೂಡಿಕೆ : ಯಾಕೆ ಗೊತ್ತಾ..?
ನವದೆಹಲಿ : ಇತ್ತೀಚೆಗಷ್ಟೆ ಕೇಂದ್ರ ಚುನಾವಣಾ ಆಯೋಗ ಪಂಜಾಬ್ ಸೇರಿ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿ ಮಾಡಿತ್ತು.
ಇದೀಗ ರಾಜಕೀಯ ಪಕ್ಷಗಳ ಮನವಿಯ ಮೇರೆಗೆ ಚುನಾವಣಾ ಆಯೋಗ ಪಂಜಾಬ್ ಚುನಾವಣಾ ದಿನಾಂಕವನ್ನು ಮುಂದೂಡಲಾಗಿದೆ.
ಫೆಬ್ರವರಿ 20 ರಂದು ಪಂಜಾಬ್ ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಫಲತಾಂಶ ಪ್ರಕಟವಾಗಲಿದೆ.
ಈ ಹಿಂದೆ ಫೆಬ್ರವರಿ 14 ರಂದು ಚುನಾವಣೆ ನಡೆಯಬೇಕಿತ್ತು. ಇದೀಗ ಆ ದಿನಾಂಕವನ್ನು 6 ದಿನ ಮುಂದಕ್ಕೆ ಹಾಕಲಾಗಿದೆ.
ಕಾರಣವೇನು..?
ಪಂಜಾಬ್ ನಲ್ಲಿ ಫೆಬ್ರವರಿ 16 ರಂದು ಗುರು ರವಿದಾಸ್ ಜನ್ಮದಿನವನ್ನು ಆಚರಣೆ ಮಾಡಲಾಗುತ್ತದೆ.
ಈ ವೇಳೆ ಶೇಕಡಾ 32 ರಷ್ಟು ಮತದಾರರಿರುವ ಪರಿಶಿಷ್ಟ ಜಾತಿಯ ಸಮುದಾಯದವರು, ಫೆಬ್ರವರಿ 10ರಿಂದ 16 ವರೆಗೂ ಉತ್ತರಪ್ರದೇಶದ ವಾರಣಾಸಿಗೆ ತೆರಳುತ್ತಾರೆ.
ಹೀಗಾಗಿ ಫೆಬ್ರವರಿ 14 ರಂದು ಮತದಾನಕ್ಕೆ ಅವರು ಅನುಪಸ್ಥಿತಿಯಲ್ಲಿರಲಿದ್ದಾರೆ.
ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಚನ್ನಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಇದಕ್ಕೆ ಸ್ಪಂದಿಸಿರುವ ಆಯೋಗ ಚುನಾವಣೆಯನ್ನು ಮುಂದೂಡಿದೆ.









