ಇಂದಿನಿಂದ ಸೈಯದ್ ಮೋದಿ ಇಂಟರ್ ನ್ಯಾಷನಲ್ ಬ್ಯಾಡ್ಮಿಟನ್ ಟೂರ್ನಿ ಆರಂಭ
ಇಂದಿನಿಂದ ಸೈಯದ್ ಮೋದಿ ಇಂಟರ್ ನ್ಯಾಷನಲ್ ಬ್ಯಾಡ್ಮಿಟನ್ ಟೂರ್ನಿ ಆರಂಭವಾಗಲಿದೆ.. ಉತ್ತರಪ್ರದೇಶದ ಬಾಬು ಬನಾರಸಿ ದಾಸ್ ಒಳಾಂಗಣ ಕ್ರೀಡಾಂಣಗಣಲ್ಲಿ ಪಂದ್ಯ ಆರಂಭವಾಗಲಿದೆ.. ಇನ್ನೂ ಈಗಾಗಲೇ 2 ಬಾರಿ ಒಲಿಂಪಿಕ್ ಪದಕ ವಿಜೇತೆ ಆಗಿರುವ ಪಿ.ವಿ.ಸಿಂಧು ಪ್ರಶಸ್ತಿ ಫೇವರಿಟ್ ಎನಿಸಿಕೊಂಡಿದ್ದಾರೆ.
ಮೊದಲ ಸುತ್ತಲ್ಲಿ ಅವರು ಭಾರತದವರೇ ಆದ ತಾನ್ಯ ಹೇಮಂತ್ ರ ಸವಾಲನ್ನು ಎದುರಿಸಲಿದ್ದಾರೆ. 3 ಬಾರಿಯ ಚಾಂಪಿಯನ್ ಸೈನಾ ನೆಹ್ವಾಲ್ ಕೂಡಾ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಆರಂಭಿಕ ಸುತ್ತಲ್ಲಿ ಚೆಕ್ ಗಣರಾಜ್ಯದ ತೆರೆಜಾ ವಿರುದ್ಧ ಆಡಲಿದ್ದಾರೆ. ಇವರ ಹೊರತಾಗಿ ಇನ್ನೂ 16 ಭಾರತೀಯ ಶಟ್ಲರ್‌ಗಳು ಮಹಿಳಾ ಸಿಂಗಲ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.
2017ರಲ್ಲಿ ಮೊದಲ ಬಾರಿ ಮಹಿಳಾ ಸಿಂಗಲ್ಸ್ ಚಾಂಪಿಯನ್ ಆಗಿದ್ದ ಸಿಂಧು, ಇದೀಗ ಮತ್ತೊಮ್ಮೆ ಪ್ರಶಸ್ತಿಗೆ ಮುತ್ತಿಕ್ಕಲು ಎದುರು ನೋಡುತ್ತಿದ್ದಾರೆ.








