ಹೋಳಿ ಹಬ್ಬಕ್ಕೆ ಸಿದ್ದತೆ ನಡೆಸಿದ ಅಕ್ಷಯ್ ಅಭಿನಯದ ಬಚ್ಚನ್ ಪಾಂಡೆ…
ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಮುಂಬರುವ ಚಿತ್ರ ಬಚ್ಚನ್ ಪಾಂಡೆ ಸಿನಿಮಾದ ರಿಲೀಸ್ ಡೇಟ್ ಬಿಡುಗಡೆ ಮಾಡಲಾಗಿದೆ. ಮಾರ್ಚ್ 18 ರಂದು ಹೊಳಿ ಹಬ್ಬದ ಸಂಭ್ರಮಕ್ಕೆ ಅಕ್ಷಯ್ ಚಿತ್ರವನ್ನ ಕಾಯ್ದಿರಿಸಲಾಗಿದೆ. ಈ ಚಿತ್ರದಲ್ಲಿ ಗ್ಯಾಂಗ್ ಸ್ಟಾರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರೋಗೆ ಜೊತೆಯಾಗಿ ಕೃತಿ ಸನೂನ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ನಟಿಸಿದ್ದಾರೆ.
ಚಿತ್ರದ ರಿಲೀಸ್ ಡೇಟ್ ಜೊತೆಗೆ ಎರಡು ಪೋಸ್ಟರ್ ಗಳನ್ನ ಬಿಡುಗಡೆಮಾಡಲಾಗಿದೆ, ಒಂದು ಪೊಸ್ಟರ್ ನಲ್ಲಿ ಶರ್ಟ್ ಎರಡು ಗುಂಡಿ ಬಿಚ್ಚಿ, ತಲೆಗೆ ಬಟ್ಟೆ ಕಟ್ಟಿಕೊಂಡು ಹಿಂದಗಡೆ ಚೀಲದಲ್ಲಿ ಶಸ್ತ್ರಗಳನ್ನ ಹಿಡಿದಿರುವ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಮತ್ತ[ದು ಪೊಸ್ಟರ್ ನಲ್ಲಿ ಟ್ರಕ್ ನ ಮುಂದುಗಡೆ ಬಾನೆಟ್ ಮೇಲೆ ಕುಳಿತು ಪಿಸ್ತೂಲ್ ಹಿಡಿದಿರುವುದು ಕಂಡು ಬಂದಿದೆ. ಅವನ ಗ್ಯಾಂಗ್ ಟ್ರಕ್ ನ ಸುತ್ತ ಆಯುಧಗಳನ್ನ ಹಿಡಿದುಕೊಂಡಿರುವುದು ಪೊಸ್ಟರ್ ನಲ್ಲಿ ಕಾಣಿಸುತ್ತದೆ.
ಈ ಕುರಿತು ಅಕ್ಷಯ್ “ ಆಕ್ಷನ್, ಕಾಮಿಡಿ, ರೊಮ್ಯಾನ್ಸ್, ಡ್ರಾಮ ಹೊಂದಿರುವ ಚಿತ್ರ ಲೊಡಿಂಗ್ ಈ ಹೋಳಿ ಹಬ್ಬದಂದು ಮಾರ್ಚ್ 18 ಕ್ಕೆ ತೆರೆಗೆ ಬರಲಿದೆ ಎಂದು ಬರೆದಿದ್ದಾರೆ.
ಬಚ್ಚನ್ ಪಾಂಡೆ ಒಬ್ಬ ದರೋಡೆಕೋರನ ಸುತ್ತ ನಡೆಯುವ ಕಥೆ. ದರೋಡೆಕಾರನಾಗಿದ್ದು ನಟನಾಗಲು ಹಂಬಲಿಸುತ್ತಾನೆ, ಕೃತಿ ಸನನ್ ಪತ್ರಕರ್ತೆಯಾಗಿದ್ದು ನಿರ್ದೇಶಕಳಗಲು ಬಯಸುತ್ತಾಳೆ. ಚಿತ್ರದಲ್ಲಿ ಅರ್ಷದ್ ವಾರ್ಸಿ, ಪಂಕಜ್ ತ್ರಿಪಾಠಿ ಮತ್ತು ಪ್ರತೀಕ್ ಬಬ್ಬರ್ ಕೂಡ ನಟಿಸಿದ್ದಾರೆ.
ಈ ಚಿತ್ರವನ್ನು ನಿಶ್ಚಯ್ ಕುಟ್ಟಂಡ ಬರೆದಿದ್ದು, ಫರ್ಹಾದ್ ಸಾಮ್ಜಿ ನಿರ್ದೇಶಿಸಿದ್ದಾರೆ. ಇದಕ್ಕೂ ಮೊದಲು, ಇದನ್ನು 2020 ರ ಕ್ರಿಸ್‌ಮಸ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು ಆದರೆ ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಅದನ್ನು ಮುಂದೂಡಲಾಯಿತು.
Action ✔️
Comedy ✔️
Romance ✔️
Drama ✔️L-O-A-D-I-N-G this Holi!#SajidNadiadwala’s #BachchanPandey in cinemas on March 18,2022@farhad_samji @kritisanon @Asli_Jacqueline @ArshadWarsi @TripathiiPankaj @prateikbabbar @saharshshukla6 #AbhimanyuSingh @NGEMovies @WardaNadiadwala pic.twitter.com/k5rw0iOLCg
— Akshay Kumar (@akshaykumar) January 18, 2022








