ಸಮನ್ವಿ ಜೊತೆ ಕಳೆದ ಕೊನೆ ಕ್ಷಣಗಳನ್ನ ಹಂಚಿಕೊಂಡ ಅಮೃತಾ
ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ನ್ನ ಕಳೆದುಕೊಂಡು ಕುಟುಂಬ ದುಃಖದಲ್ಲಿದೆ. ಸಮನ್ವಿ ಕೊನೆಯ ಭಾರಿ ತಾಯಿಗೆ ಮುತ್ತಿಟ್ಟಿರುವ ವೀಡಿಯೋವನ್ನ ಅಮೃತಾ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮಗಳ ಜೊತೆಗೆ ಕಳೆದ ಕೊನೆಯ ಕ್ಷಣಗಳನ್ನ ಶೇರ್ ಮಾಡಿಕೊಂಡಿದ್ದಾರೆ. ಇದು ನನಗೆ ಅವಳ ಲಾಸ್ಟ್ ಕಿಸ್ ಇದಾಗಿದ್ದು ನನ್ನನ ನಾನು ಲವ್ ಮಾಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇನ್ನೊಂದು ವೀಡಿಯೊದಲ್ಲಿ ಸಮನ್ವಿ ತನ್ನ ಪಾಡಿಗೆ ಆಟವಾಡುತ್ತಿರುವುದನ್ನ ಕಾಣಬಹುದು.
ಕಳೆದ ಗುರುವಾರ ಕೋಣನಕುಂಟೆ ಬಳಿ ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಸಮನ್ವಿ ಸ್ಥಳದಲ್ಲೆ ಮೃತಪಟ್ಟಿದ್ದರೆ ಗರ್ಭಿಣಿಯಾಗಿದ್ದ ಅಮೃತ ಸಣ್ಣ ಪುಟ್ಟ ಗಾಯಗಳಿಂದ ಬಚಾವ್ ಆಗಿದ್ದರು. ನನ್ನ ಮಗಳು ಮತ್ತೆ ನನ್ನ ಹೊಟ್ಟೆಯಲ್ಲಿ ಹುಟ್ಟಿ ಬರಲಿ ಅಂತ ಪ್ರಾರ್ಥಿಸಿ ಅಂತ ಇನ್ಸ್ಟಾ ದಲ್ಲಿ ಪೋಸ್ಟ್ ಮಾಡಿ ಬೇಡಿಕೊಂಡಿದ್ದಾರೆ.