ವಯನಾಡ್, ಮೇ 17 : ಕೇರಳದಲ್ಲಿ ಯಾವುದೇ ಕೊರೊನಾ ಪ್ರಕರಣಗಳು ಪತ್ತೆಯಾಗದೆ ಹಸಿರು ವಲಯವಾಗಿ ಗುರುತಿಸಲ್ಪಟ್ಟ ವಯನಾಡ್ ನಲ್ಲಿ ಇದೀಗ ಗರಿಷ್ಟ ಕೊರೊನಾ ಭಾದಿತರು ಇದ್ದಾರೆ. ವಯನಾಡ್ ನಲ್ಲಿ 21 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಇದು ಇಡೀ ಕೇರಳ ರಾಜ್ಯದಲ್ಲೇ ಅತ್ಯಧಿಕವಾಗಿದೆ. ಎಪ್ರಿಲ್ 26ರಂದು ತಮಿಳುನಾಡಿನ ಕೋಯೆಂಬೇಡು ಮಾರುಕಟ್ಟೆಯಿಂದ ಕೇರಳಕ್ಕೆ ಆಗಮಿಸಿದ ಟ್ರಕ್ ಚಾಲಕರೊಬ್ಬರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಹೋಂ ಕ್ವಾರಂಟೈನ್ ನಲ್ಲಿದ್ದ ಅವರಿಗೆ ಮನೆಯಲ್ಲಿ ಪ್ರತ್ಯೇಕವಾಗಿರಲು ಸೂಚಿಸಿದ್ದರೂ ಅವರಿಂದ ಅವರ ತಾಯಿ, ಪತ್ನಿ, ಮಗಳು, ಆಳಿಯ, ಮಗ, ಮೊಮ್ಮಗ ನಿಗೆ ಕೊರೋನಾ ಸೋಂಕು ಹರಡಿದೆ. ಹೀಗಾಗಿ ಇವರೆಲ್ಲರ ಸಂಪರ್ಕಕ್ಕೆ ಬಂದಿರುವ ಎಲ್ಲರನ್ನೂ ಪತ್ತೆ ಹಚ್ಚಿ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಮತ್ತು ಕೊರೊನಾ ಪತ್ತೆಯಾದವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.ಇದೀಗ ರಾಜ್ಯದಲ್ಲಿ ಅನ್ಯ ರಾಜ್ಯಗಳಿಂದ ಬರುವ ಟ್ರಕ್ ಚಾಲಕರಿಗೆ ಕಟ್ಟುನಿಟ್ಟಿನ ಕ್ವಾರಂಟೈನ್ ನಿಯಮಗಳನ್ನು ವಿಧಿಸಲಾಗುತ್ತಿದೆ.








