ವಿರಾಟ್ ಕೊಹ್ಲಿ ಜೊತೆ ಬವುಮಾ ಜಗಳ…!
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 31 ರನ್ ಗಳೊಂದಿಗೆ ಸೋಲು ಕಂಡಿದೆ.
ಇದರೊಂದಿಗೆ ಮೂರು ಮ್ಯಾಚ್ ಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಹಿನ್ನಡೆ ಹೊಂದಿದೆ.
ಮೊದಲ ಪಂದ್ಯದಲ್ಲಿ ಶಿಖರ್, ಕೊಹ್ಲಿ, ಶರ್ದೂಲ್ ಠಾಕೂರ್ ಉತ್ತಮ ಪ್ರದರ್ಶನದ ಹೊರತಾಗಿಯೂ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಮುಂದೆ ಮಂಡಿಯೂರಿದೆ.
ಇನ್ನು ಪಾರ್ಲ್ ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಮಾಡಿದ್ದು, ಈ ವೇಳೆ ಆಸಕ್ತಿಕರ ಘಟನೆಯೊಂದು ನಡೆದಿದೆ.
ಇನ್ನಿಂಗ್ಸ್ ನ 36ನೇ ಓವರ್ ನ ನಾಲ್ಕನೇ ಎಸೆತವನ್ನು ಆಫ್ರಿಕಾ ನಾಯಕ ಬವುಮಾ, ಶಾರ್ಟ್ ಕವರ್ ರಿಜಿಯನ್ ಕಡೆ ಆಡಿದರು. ಅದು ನೇರವಾಗಿ ವಿರಾಟ್ ಕೊಹ್ಲಿ ಕೈ ಸೇರಿತು.
ಚೆಂಡು ಕೈಗೆ ಸಿಗುತ್ತಿದ್ದಂತೆ ಕೀಪರ್ ಕಡೆ ಟ್ರೋ ಮಾಡುವ ಉದ್ದೇಶದಿಂದ ವಿರಾಟ್ ಕೊಹ್ಲಿ ಚೆಂಡನ್ನು ಬಲವಾಗಿ ಎಸೆದರು. ಆದ್ರೆ ಅದು ಆಕಸ್ಮಾತಾಗಿ ಬವುಮಾಗೆ ತಗುಲಿತು.
ವಿರಾಟ್ ಎಸೆದ ಚೆಂಡು ತಗುಲುತ್ತಿದ್ದಂತೆ ಕೊಹ್ಲಿಯತ್ತ ಕೋಪದಿಂದ ನೋಡಿದ ಬವುಮಾ, ನಾನು ಕ್ರೀಸ್ ನಲ್ಲಿಯೇ ಇದ್ದೇನೆ, ಆ ರೀತಿ ಟ್ರೋ ಮಾಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಇದರೊಂದಿಗೆ ಕೋಪಗೊಂಡ ವಿರಾಟ್ ಕೊಹ್ಲಿ, ನಾನೇನು ಉದ್ದೇಶಪೂರ್ವಕವಾಗಿ ನಿನ್ನ ಮೇಲೆ ಚೆಂಡು ಎಸೆಯಲಿಲ್ಲ.
ವಿಕೆಟ್ ಕೀಪರ್ ಗೆ ಎಸೆಯುವ ಕ್ರಮದಲ್ಲಿ ನಿನಗೆ ತಾಕಿದೆ. ಇದನ್ನ ಒಬ್ಬ ಬ್ಯಾಟರ್ ಆಗಿ ಅರ್ಥ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ವಿರಾಟ್ ಮತ್ತು ಬವುಮಾ ಈ ಮಾತುಕತೆ ಮೈದಾನದಲ್ಲಿದ್ದ ಮೈಕ್ ನಲ್ಲಿ ದಾಖಲೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಸಚಿನ್ ದಾಖಲೆಯನ್ನು ಪುಡಿಗಟ್ಟಿದ್ದಾರೆ. ವಿದೇಶಿ ನೆಲದಲ್ಲಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನ ವಿರಾಟ್ ಬರೆದುಕೊಂಡರು.
ಅಲ್ಲದೇ ಈ ಮ್ಯಾಚ್ ನಲ್ಲಿ 8 ವರ್ಷಗಳ ಬಳಿಕ ಯಾವುದೇ ಜವಾಬ್ದಾರಿ ಇಲ್ಲದೇ ಕಣಕ್ಕಿಳಿದಿದ್ದರು. ಪಂದ್ಯದಲ್ಲಿ 63 ಎಸೆತಗಳನ್ನು ಎದುರಿಸಿದ ವಿರಾಟ್, ಮೂರು ಬೌಂಡರಿಗಳ ನೆರವಿನೊಂದಿಗೆ 51 ರನ್ ಗಳಿಸಿದರು.









