ಮೆಡಿಕಲ್ ಸ್ಟೋರ್ ಗಳಲ್ಲೂ ಲಭ್ಯ ಕೊರೊನಾ ಲಸಿಕೆ Saaksha Tv
ನವದೆಹಲಿ: ದೇಶದಲ್ಲಿ ಕೊರೊನಾ ಮಹಾಮಾರಿ ಪ್ರತಿದಿನ ಏರಿಕೆಯಾಗುತ್ತಿದೆ. ಹಾಗೇ ಕೊರೊನಾ ರೂಪಾಂತರ ಓಮಿಕ್ರಾನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು ಇದನ್ನು ತಡೆಗಟ್ಟುವ ಹಿನ್ನಲೇ ಲಸಿಕೆಗಳನ್ನು ಮುಕ್ತ ಮಾರುಕ್ಕಟ್ಟೆಯಲ್ಲಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ.
ಕೋವ್ಯಾಕ್ಸಿನ್ ಮತ್ತು ಕೋವಿಶಿಲ್ಡ್ ಲಸಿಕೆಗಳು ಕೊರೊನಾ ವಿರುದ್ಧ ಹೋರಾಡಲು ಯಶಸ್ವಿಯಾಗಿದ್ದು, ಇದು ಮೆಡಿಕಲ್ ಸ್ಟೋರಗಳಲ್ಲೂ ಲಭ್ಯವಾಗಲಿವೆ. ಇದಕ್ಕೆ ಕೇಂದ್ರೀಯ ಔಷಧಿ ಪ್ರಾಧಿಕಾರ ತಜ್ಞರ ಸಮಿತಿ ಒಪ್ಪಿಗೆ ನೀಡಿದ್ದು, ಇದಾದ ಬಳಿಕ ಲಸಿಕೆಗಳನ್ನು ತಯಾರಿಸುವ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಕಂಪನಿಗಳ ವತಿಯಿಂದ ಔಷಧಿಗಳ ಗುಣಮಟ್ಟ ನಿಯಂತ್ರಣ ಪ್ರಾಧಿಕಾರದ ಅನುಮತಿಗಾಗಿ ಅರ್ಜಿ ಸಲ್ಲಿಸಲಾಗಿದೆ.
ತುರ್ತು ಪರಿಸ್ಥಿತಿಯಲ್ಲಿ ಕೊರೊನಾ ನಿರೋಧಕ ಲಸಿಕೆ ಬಳಕೆಗೆ ಅನುಮತಿ ನೀಡಲಾಗಿತ್ತು. ಇದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವಂತಿಲ್ಲ. ಆದರೆ ಈಗ ಕೇಂದ್ರೀಯ ಔಷಧಿ ಪ್ರಾಧಿಕಾರ ತಜ್ಞರ ಸಮಿತಿ ಒಪ್ಪಿಗೆ ನೀಡಿರುವುದರಿಂದ ಡಿಜಿಸಿಐ ಅನುಮತಿ ದೊರೆತರೆ ಶೀಘ್ರವೇ ಮೆಡಿಕಲ್ ಸ್ಟೋರ್ಗಳಲ್ಲಿಯೂ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.