ಕಿಟ್ ಕ್ಯಾಟ್ ಚಾಕ್ಲೇಟ್ ಮೇಲೆ ಹಿಂದು ದೇವರ ಚಿತ್ರ – ಭಕ್ತರ ಆಕ್ರೋಶ
ನೆಸ್ಲೆ ಇಂಡಿಯಾಬ ಕಂಪನಿ ತನ್ನ ಪ್ರಸಿದ್ಧ ಉತ್ಪನ್ನವಾದ ಕಿಟ್ಕ್ಯಾಟ್ನ ಕವರ್ ನ ಮೇಲೆ ಹಿಂದುಗಳ ದೇವರನ್ನ ಚಿತ್ರಿಸಿರುವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಕವರ್ ವಿನ್ಯಾಸದ ಮೇಲೆ ಸೋಶಿಯಲ್ ಮಿಡಿಯಾಗಳಲ್ಲಿ ಕೋಪಕ್ಕೆ ಗುರಿಯಾಗಿದೆ.ಕವರ್ ನ ಮೇಲೆ ಭಗವಾನ್ ಜಗನ್ನಾಥ, ಬಲಭದ್ರ ಮತ್ತು ಮಾತಾ ಸುಭದ್ರೆಯ ಚಿತ್ರಗಳನ್ನು ಒಳಗೊಂಡಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಅತ್ಯಂತ ಪೂಜ್ಯ ದೇವತೆಗಳ ಚಿತ್ರಗಳು ಕೊನೆಯಲ್ಲಿ ರಸ್ತೆಗಳು, ಚರಂಡಿಗಳು ಮತ್ತು ಡಸ್ಟ್ಬಿನ್ಗಳಲ್ಲಿ ಕಂಡುಬರುತ್ತವೆ ಏಕೆಂದರೆ ಜನರು ಚಾಕೊಲೇಟ್ಗಳನ್ನು ತಿಂದ ನಂತರ ಕವರ್ ಗಳನ್ನ ಎಸೆಯುತ್ತಾರೆ. ಚಾಕ್ಲೇಟ್ ಕವರ್ ಮೇಲೆ ಚಿತ್ರಗಳನ್ನ ತೆಗೆಯುವಂತೆ ಜನರು ಎಫ್ಎಂಸಿಜಿ ಬ್ರಾಂಡ್ಗೆ ವಿನಂತಿಸಿದ್ದಾರೆ.
“ದಯವಿಟ್ಟು ನಿಮ್ಮ @kitkat ಚಾಕೊಲೇಟ್ ಕವರ್ನಲ್ಲಿರುವ ಭಗವಾನ್ ಜಗನ್ನಾಥ, ಬಲಭದ್ರ ಮತ್ತು ಮಾತಾ ಸುಭದ್ರಾ ಫೋಟೋಗಳನ್ನು ತೆಗೆದುಹಾಕಿ. ಜನರು ಚಾಕೊಲೇಟ್ ಅನ್ನು ತಿಂದು ಕವರ್ ಅನ್ನು ರಸ್ತೆ, ಚರಂಡಿ, ಡಸ್ಟ್ಬಿನ್ ಇತ್ಯಾದಿಗಳ ಮೇಲೆ ಎಸೆಯುತ್ತಾರೆ. ಆದ್ದರಿಂದ ದಯವಿಟ್ಟು ಫೋಟೋಗಳನ್ನು ತೆಗೆದುಹಾಕಿ” ಎಂದು ಟ್ವೀಟರ್ ಬಳಕೆದಾರರು ಬರೆದು, ಕಳವಳ ವ್ಯಕ್ತಪಡಿಸಿದ್ದಾರೆ.
ಧಾರ್ಮಿಕ ಭಾವನೆಗಳನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಕಂಪನಿಯನ್ನು ಟೀಕಿಸಿದ ಮತ್ತೊಬ್ಬ ಬಳಕೆದಾರರು, “ಭಾರತದ ಎಲ್ಲಾ ಬಹು ರಾಷ್ಟ್ರೀಯ ಕಂಪನಿಗಳು, ಹಿಂದೂಗಳ ಧಾರ್ಮಿಕ ಭಾವನೆಯ ಮೇಲೆ ಹಾಸ್ಯ ಮಾಡಲು ಬಲ ಪಡೆದಿವೆ ಎಂದು ಟ್ವೀಟ್ ಮಾಡಿದ್ದಾರೆ.
ವಿರೋಧ ವ್ಯಕ್ತವಾದ ನಂತರ ನೆಸ್ಲೆ ಪ್ರಾಡಕ್ಟ್ಗಳನ್ನ ತೆಗದುಕೊಳ್ಳುವುದಾಗಿ ತಿಳಿಸಿದೆ. ಮತ್ತು ಕ್ಷಮೆ ಕೇಳಿದೆ








