IPL 2022 | ಲಕ್ನೋ, ಅಹಮದಾಬಾದ್ ಸೇರಿದ ಆಟಗಾರರು ಇವರೇ.?
ಐಪಿಎಲ್ ನ ಹೊಸ ಪ್ರಾಂಚೈಸಿಗಳಾದ ಲಕ್ನೋ ಮತ್ತು ಅಹಮದಾಬಾದ್ ತಂಡಗಳು ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಂಡಿವೆ.
ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೂ ಮುನ್ನಾ ಹೊಸ ಫ್ರಾಂಚೈಸಿಗಳು ತಲಾ ಮೂರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕಾಗಿತ್ತು.
ಇದೀಗ ಆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಲಕ್ನೋ ತಂಡ ಕೆ.ಎಲ್.ರಾಹುಲ್ ಅವರನ್ನು ನಾಯಕರಾಗಿ ಆಯ್ಕೆ ಮಾಡಿಕೊಂಡಿದೆ.
ಅಹಮದಾಬಾದ್ ತಂಡ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ ಅವರನ್ನು ಕ್ಪಾಪ್ಟನ್ ಆಗಿ ಆಯ್ಕೆ ಮಾಡಿಕೊಂಡಿದೆ.
ಇನ್ನು ಲಕ್ನೋ ತಂಡ ತನ್ನ ಸ್ಪೆಷಲ್ ಪಿಕ್ ಅಧಿಕಾರವನ್ನು ಬಳಸಿಕೊಂಡು ಕೆ.ಎಲ್. ರಾಹುಲ್, ರವಿ ಬಿಷ್ಣೋಯಿ ಮತ್ತು ಮಾರ್ಕಸ್ ಸ್ಟೋಯ್ನಿಸ್ ರನ್ನು ಆಯ್ಕೆ ಮಾಡಿದೆ.
ಅಹಮದಾಬಾದ್ ತಂಡ ಹಾರ್ದಿಕ್ ಪಾಂಡ್ಯ ಜೊತೆಗೆ ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಮತ್ತು ಉದಯೋನ್ಮುಖ ಆರಂಭಿಕ ಆಟಗಾರ ಶುಭ್ ಮನ್ ಗಿಲ್ ರನ್ನು ತಂಡಕ್ಕೆ ಸೇರಿಸಿಕೊಂಡಿದೆ.









