ಇಂಡಿಯಾ ಗೇಟ್ ಅಮರ್ ಜವಾನ್ ಜ್ಯೋತಿ, 50 ವರ್ಷದ ನಂತರ ಸ್ಥಳಾಂತರ
50 ವರ್ಷಗಳಿಂದ ದೆಹಲಿಯ ಇಂಡಿಯಾ ಗೇಟ್‌ನಲ್ಲಿ ಬೆಳಗುತ್ತಿರುವ ಅಮರ್ ಜವಾನ್ ಜ್ಯೋತಿ, ಶಾಶ್ವತವಾಗಿ ಸ್ಥಳಾಂತರವಾಗಿಲಿದೆ. ಗಣರಾಜ್ಯೋತ್ಸವಕ್ಕೂ ಮುನ್ನ ಈ ಜ್ವಾಲೆಯುನ್ನ ಇಂಡಿಯಾ ಗೇಟ್ ಬದಲಿಗೆ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಬೆಳಗಲಿದೆ. ಶುಕ್ರವಾರ ಮಧ್ಯಾಹ್ನ 3.30 ಕ್ಕೆ ಯುದ್ಧ ಸ್ಮಾರಕದಲ್ಲಿ ಜ್ಯೋತಿ ವಿಲೀನಗೊಳ್ಳಲಿದೆ.
ಭಾರತೀಯ ಸೇನೆಯ ಅಧಿಕಾರಿಯ ಪ್ರಕಾರ, ಅಮರ್ ಜವಾನ್ ಜ್ಯೋತಿಯ ಜ್ಯೋತಿಯನ್ನು ಶುಕ್ರವಾರ ಮಧ್ಯಾಹ್ನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತರಲಾಗುವುದು. ಅಲ್ಲಿ ಎರಡೂ ಜ್ವಾಲೆಗಳು ಸಮಾರಂಭದಲ್ಲಿ ವಿಲೀನಗೊಳ್ಳುತ್ತವೆ ಎಂದು ತಿಳಿಸಿದ್ದಾರೆ. ಏರ್ ಮಾರ್ಷಲ್ ಬಲಭದ್ರ ರಾಧಾಕೃಷ್ಣ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಅಮರ್ ಜವಾನ್ ಜ್ಯೋತಿಯನ್ನು 1971 ರ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಹುತಾತ್ಮರಾದ 3,843 ಭಾರತೀಯ ಸೈನಿಕರ ನೆನಪಿಗಾಗಿ ನಿರ್ಮಿಸಲಾಗಿದೆ. ಇದನ್ನು ಮೊದಲು 1972 ರಲ್ಲಿ ಬೆಳಗಿಸಲಾಯಿತು. 26 ಫೆಬ್ರವರಿ 1972 ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಉದ್ಘಾಟಿಸಿದ್ದರು.
ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಕೇಂದ್ರ ಸರ್ಕಾರವು 2019 ರಲ್ಲಿ ನಿರ್ಮಿಸಿದೆ. 1947 ರಲ್ಲಿ ದೇಶದ ಸ್ವಾತಂತ್ರ್ಯದ ನಂತರ ಹುತಾತ್ಮರಾದ 26,466 ಭಾರತೀಯ ಸೈನಿಕರ ಗೌರವಾರ್ಥವಾಗಿ ಇದನ್ನು ನಿರ್ಮಿಸಲಾಗಿದೆ. ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಅವರು 25 ಫೆಬ್ರವರಿ 2019 ರಂದು ಉದ್ಘಾಟಿಸಿದರು.
ಅಮರ್ ಜವಾನ್ ಜ್ಯೋತಿಯನ್ನು ಇಂಡಿಯಾ ಗೇಟ್‌ನಿಂದ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಸ್ಥಳಾಂತರಿಸುವ ಸರ್ಕಾರದ ನಿರ್ಧಾರದ ಬಗ್ಗೆ ವಿಭಿನ್ನ ರೀತಿಯ ಪ್ರತಿಕ್ರಿಯೆಗಳು ಮುನ್ನೆಲೆಗೆ ಬಂದಿವೆ. ಇದು ಅವರ ಭಾವನೆಗಳಿಗೆ ಸಂಬಂಧಿಸಿದ್ದು ಎಂದು ಹೇಳುವ ಮೂಲಕ ಹಲವು ಮಾಜಿ ಸೈನಿಕರು ಕೂಡ ತೆಗೆದುಹಾಕದಂತೆ ಮನವಿ ಮಾಡಿದ್ದಾರೆ.
ಈಗಾಗಲೆ ರಾಷ್ಟ್ರೀಯ ಯುದ್ಧ ಸ್ಮಾರಕ ಅಮರ್ ಜವಾನ್ ಜ್ಯೋತಿ ಇದೆ. ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಯನ್ನು ತಾತ್ಕಾಲಿಕವಾಗಿ ಸ್ಥಾಪಿಸಲಾಗಿದೆ ಎಂದು ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ಅರುಣ್ ಪ್ರಕಾಶ್ ಇಂಗ್ಲಿಷ್ ಪತ್ರಿಕೆಯೊಂದರೊಂದಿಗಿನ ಸಂವಾದದಲ್ಲಿ ತಿಳಿಸಿದ್ದಾರೆ. ಈಗ ನಮ್ಮದೇ ಆದ ಯುದ್ಧ ಸ್ಮಾರಕವಿದ್ದು, ಅದನ್ನು ಅಲ್ಲಿಗೆ ಕೊಂಡೊಯ್ಯುವುದು ಉತ್ತಮ. ಎಂದು ತಿಳಿಸಿದ್ದಾರೆ.
42 ಮೀಟರ್ ಎತ್ತರದ ಇಂಡಿಯಾ ಗೇಟ್ ಅನ್ನು ಬ್ರಿಟಿಷ್ ಸರ್ಕಾರ ನಿರ್ಮಿಸಿತ್ತು. 1914-21ರ ನಡುವಿನ ಮೊದಲ ಮಹಾಯುದ್ಧ ಮತ್ತು ಮೂರನೇ ಅಫ್ಘಾನ್ ಯುದ್ಧದಲ್ಲಿ ಬ್ರಿಟಿಷ್ ಸೇನೆಯ ಪರವಾಗಿ ಮಡಿದ 84,000 ಭಾರತೀಯ ಸೈನಿಕರ ನೆನಪಿಗಾಗಿ ಇದನ್ನು ಬ್ರಿಟಿಷ್ ಸರ್ಕಾರ ನಿರ್ಮಿಸಿತ್ತು. ಅದರ ಮೇಲೆ ಆ ಸೈನಿಕರ ಹೆಸರನ್ನೂ ಕೆತ್ತಲಾಗಿದೆ.








