ವೈಟ್ಫೀಲ್ಡ್ ನ ಗ್ರ್ಯಾಂಡ್ ಶೆರಟಾನ್ ಹೋಟೆಲ್ನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ 2022 ರಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಗುಜರಾತ್ ಜೇಂಟ್ಸ್ ತಮಿಳು ತಲೈವಾಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದೆ.. 2 ಅಂಕಗಳ ಅಂತರದಿಂದ ಜೇಂಟ್ಸ್ ತಲೈವಾಸ್ ಅನ್ನ ಮಣಿಸಿದ್ದು , ರಣ ರೋಚಕ ಪಂದ್ಯದಲ್ಲಿ ಗೆದ್ದ ಬಳಿಕವೂ ಅಂಕ ಪಟ್ಟಿಯಲ್ಲಿ ಗುಜರಾತ್ ಜೇಂಟ್ಸ್ 10 ನೇ ಸ್ಥಾನದಲ್ಲಿದೆ..
ದಿನದ ಮೊದಲ ಪಂದ್ಯದಲ್ಲಿ ಮಹೆಂದ್ರ 9 ಅಂಕ ಪಡೆದು ಸೂಪರ್ 10 ಪಡೆಯದೇ ನಿರಾಸೆ ಅನುಭವಿಸಿದ್ರೆ , ರಾಕೇಶ್ 6 ಪಾಯಿಂಟ್ಸ್ ಪಡೆದರು.. ಆದ್ರೆ ಇವರ ಅದ್ಭುತ ಆಟ ಗುಜರಾತ್ ಗೆ ಗೆಲುವು ತಂದುಕೊಡ್ತು.. ಗುಜರಾತ್ 37–35 ರಿಂದ ತಮಿಳ್ ತಂಡವನ್ನು ಮಣಿಸಿತು.
ಇದರಿಂದಾಗಿ ತಮಿಳ್ ತಂಡದ ಮಂಜೀತ್ ಸೂಪರ್ 10(12), ಅಜಿಂಕ್ಯ ಪವಾರ್ ಸೂಪರ್ 10 ಪಡೆದರೂ ಅದು ವ್ಯರ್ಥವಾಯಿತು. ತಲೈವಾಸ್ ಸೋತು ಅಂಕಪಟ್ಟಿಯಲ್ಲಿ 7 ಸ್ಥಾನದಲ್ಲಿಯೇ ಉಳಿದಿದೆ.. ಇನ್ನೂ ದಿನದ 2ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ಪವನ್ ಶೆರಾವತ್ ಅದ್ಭುತ ಾಟದ ನಂತರವೂ ಒಂದು ಅಂಕದಿಂದ ಬೆಂಗಾಳ ವಿರುದ್ಧ ಸೋತು ನಿರಾಸೆ ಅನುಭವಿಸಿತು..








