ಜನರಿಗೆ ಶುಭ ಸುದ್ದಿ ನೀಡಿದ ಸಿಎಂ Saaksha Tv
ಬೆಂಗಳೂರು: ರಾಜ್ಯದಲ್ಲಿ ಬೆಲೆ ಏರಿಯಾಗುತ್ತದೆ ಎಂಬ ಸುದ್ದಿ ತಿಳಿದು ಆತಂಕದಲ್ಲಿದ್ದ ಜನರಿಗೆ, ಸಿಎಂ ಬಸವರಾಜ ಬೊಮ್ಮಾಯಿ ಶುಭ ಸುದ್ದಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಹಾಲು, ನೀರು, ವಿದ್ಯತ್ ದರ ಏರಿಸುವಂತೆ ಸರಕಾರಕ್ಕೆ ಪ್ರಸ್ತಾಪ ಬಂದಿದೆ. ಆಡಳಿತದಲ್ಲಿ ದರ ಏರಿಕೆಗೆ ಪ್ರಸ್ತಾಪ ಬರುವುದು ಸಹಜ, ಆದರೆ ದರ ಏರಿಕೆಗೆ ಇನ್ನೂ ತೀರ್ಮಾನವಾಗಿಲ್ಲ. ಅವಸರದ ನಿರ್ಧಾರ ಸರಕಾರ ತೆಗೆದುಕೊಳ್ಳುವುದಿಲ್ಲ. ಎಲ್ಲಾ ಆಯಾಮಗಳಲ್ಲೂ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ಜಲಮಂಡಳಿ, ಕೆಎಂಫ್, ಹೆಸ್ಕಾಂ ದರ ಏರಿಕೆ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಸಿದ್ದವು. ಇದರಿಂದ ಶೀಘ್ರದಲ್ಲೆ ಬೆಲೆ ಏರಿಕೆ ಬಿಸಿ ಜನಸಾಮಾನ್ಯರಿಗೆ ತಟ್ಟಲಿದೆ ಎನ್ನಾಲಾಗುತ್ತಿತ್ತು, ಮೊದಲೇ ಕೊರೊನಾ ಮಹಾಮಾರಿಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದು, ಇದು ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಆದರೆ ಸಿಎಂ ಬೊಮ್ಮಾಯಿ ಇದಕ್ಕೆ ತಾತ್ಕಾಲಿಕವಾಗಿ ತೆರೆ ಎಳೆದಿದ್ದು, ಜನರಿಗೆ ಸಾಮಾಧಾನಕರವಾಗಿದೆ.








