EV( ಎಲೆಕ್ಟ್ರಿಕಲ್ ವೆಹಿಕಲ್) ಕ್ಷೇತ್ರಕ್ಕೆ ಧುಮುಕಿದ ಅದಾನಿ
ಬಂದರು ಕ್ಷೇತ್ರ ದಿಂದ ವಿದ್ಯುತ್ ಕ್ಷೇತ್ರದವರೆಗೆ ತನ್ನ ಶಕ್ತಿಯನ್ನು ತೋರಿಸಿದ ದೇಶದ ಎರಡನೇ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಈಗ ಎಲೆಕ್ಟ್ರಿಕಲ್ ವೆಹಿಕಲ್ ರೇಸ್‌ಗೆ ಇಳಿದಿದ್ದಾರೆ.
ಎಸ್‌ಬಿ ಅದಾನಿ ಟ್ರಸ್ಟ್ ವಾಹನಗಳಿಗೆ ಟ್ರೇಡ್‌ಮಾರ್ಕ್ ಪಡೆದುಕೊಂಡಿದೆ. ಎಲೆಕ್ಟ್ರಿಕ್ ಟ್ರಕ್‌ಗಳು, ಬಸ್‌ಗಳು ಮತ್ತು ಕೋಚ್‌ಗಳನ್ನು ತಾನೇ ತಯಾರಿಸಲು ಪ್ಲಾನ್ ಹಾಕಿಕೊಂಡಿದೆ. EV ಬ್ಯಾಟರಿಗಳ ಹೊರತಾಗಿ, ದೇಶಾದ್ಯಂತ ಚಾರ್ಜಿಂಗ್ ಸ್ಟೇಷನ್‌ಗಳನ್ನ ಅದಾನಿ ಗ್ರೂಪ್ ಸ್ಥಾಪಿಸುತ್ತಿದೆ.
ಅದಾನಿ ಕಂಪನಿ ಮುಂದಿನ ದಶಕದಲ್ಲಿ ಹಸಿರು ಇಂಧನಕ್ಕಾಗಿ 5.2 ಲಕ್ಷ ಕೋಟಿ ರೂ. ಖರ್ಚು ಮಾಡಲಿದೆ. ದೇಶದ EV ಮಾರುಕಟ್ಟೆಯು ಡಿಸೆಂಬರ್ 2021 ರಲ್ಲಿ ವರ್ಷದಿಂದ ವರ್ಷಕ್ಕೆ 240% ರಷ್ಟು ಬೆಳವಣಿಗೆಯಾಗಿದೆ
ಹೀರೋ ಎಲೆಕ್ಟ್ರಿಕ್ ಮತ್ತು ಮಹೀಂದ್ರಾ ಗ್ರೂಪ್ ಎಲೆಕ್ಟ್ರಿಕ್ ವಾಹನ ವಲಯದಲ್ಲಿ ಒಟ್ಟಿಗೆ ಕೆಲಸ ಮಾಡಲಿದೆ ಎಂದು ವರದಿಯಾಗಿದೆ. ಈ ಪಾಲುದಾರಿಕೆಯ ಅಡಿಯಲ್ಲಿ, ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಮಹೀಂದ್ರಾ ಹೀರೋ ಎಲೆಕ್ಟ್ರಿಕ್‌ನಿಂದ ಬೈಕ್‌ಗಳನ್ನು ತಯಾರಿಸುತ್ತದೆ. ದೇಶದ ಎರಡು ದೊಡ್ಡ ಕಾರ್ಪೊರೇಟ್‌ಗಳಾದ ಟಾಟಾ ಗ್ರೂಪ್ ಮತ್ತು ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ವೇಗವಾಗಿ ವಿಸ್ತರಿಸುತ್ತಿವೆ.
ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಜಾಗೃತಿ ಹೆಚ್ಚುತ್ತಿರುವುದರಿಂದ ಇವಿ ಮಾರುಕಟ್ಟೆಯು ಬಹಳ ವೇಗವಾಗಿ ಬೆಳೆಯುತ್ತಿದೆ. JMK ರಿಸರ್ಚ್ ಪ್ರಕಾರ, ದೇಶದಲ್ಲಿ EV ಮಾರುಕಟ್ಟೆಯು ಡಿಸೆಂಬರ್ 2021 ರಲ್ಲಿ ವರ್ಷದಿಂದ ವರ್ಷಕ್ಕೆ 240% ರಷ್ಟು ಬೆಳೆದಿದೆ. ಡಿಸೆಂಬರ್‌ನಲ್ಲಿ 50,800 ಎಲೆಕ್ಟ್ರಿಕ್ ಗಾಡಿಗಳು ಮಾರಾಟವಾಗಿವೆ. ಆದರೆ, ಡಿಸೆಂಬರ್ 2020 ರಲ್ಲಿ, ಕೇವಲ 14,978 EVಗಳನ್ನು ನೋಂದಾಯಿಸಲಾಗಿದೆ. 2030 ರ ವೇಳೆಗೆ ದೇಶದ EV ಮಾರುಕಟ್ಟೆಯು 11 ಲಕ್ಷ ಕೋಟಿ ರೂಪಾಯಿಗಳಿಗೆ ಬೆಳೆಯುತ್ತದೆ ಎಂದು ಕನ್ಸಲ್ಟಿಂಗ್ ಸಂಸ್ಥೆ RBSA ಸಲಹೆಗಾರರು ಹೇಳಿದ್ದಾರೆ.








