ಐಎಸ್ ಐ ಗುರುತು ಇಲ್ಲದ ವಸ್ತುಗಳ ಮಾರಾಟಕ್ಕೆ ಬ್ರೇಕ್ Saaksha Tv
ಭೋಪಾಲ್: ಐಎಸ್ ಐ ಮಾರ್ಕ್ ಇಲ್ಲದ ಆಟಿಕೆಗಳನ್ನು ಭೋಪಾಲ್ ನಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಭೋಪಾಲ್ ನ ಕೆಲವು ಮಾಲ್ ಗಳಲ್ಲಿ ಐಎಸ್ ಐ ಗುರುತು ಇಲ್ಲದ ಆಟಿಕೆಗಳನ್ನ ಅಕ್ರಮವಾಗಿ ಮಾರಲಾಗುತ್ತಿತ್ತು. ಇದರ ಕಚಿತ ಮಾಹಿತಿ ಪಡೆದ ಬಿಐಎಸ್ ಹಿರಿಯ ವಿಜ್ಞಾನಿ ರಮಣ್ ತ್ರಿವೇದಿಯವರ ಮೇಲ್ವಿಚಾರಣೆಯಲ್ಲಿ ದಾಳಿ ನಡೆಸಿ ಸುಮಾರು 70 ಲಕ್ಷ ಮೌಲ್ಯದ ಚೀನಾ ಆಟಿಕೆಗಳನ್ನ ವಶಪಡಿಸಿಕೊಳ್ಳಲಾಗಿದೆ.
ಇನ್ನೂ ಈ ಆಟಿಕೆಗಳನ್ನು ಯಾವ ದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಮತ್ತು ಈ ವ್ಯಾಪಾರ ಯಾವಾಗಿನಿಂದ ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ತನಿಕೆ ನಡೆಯುತ್ತಿದೆ ಎಂದು ಬಿಐಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನುಳಿದಂತೆ ಅಕ್ರಮವಾಗಿ ಆಟಿಕೆಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳನ್ನು ಸೀಲ್ ಮಾಡಲಾಗಿದೆ.








