IPL 2022 – ಹರಾಜಿನಿಂದ ದೂರ ಉಳಿದ ದಿಗ್ಗಜ ಆಟಗಾರರು
ಐಪಿಎಲ್ 2022 ರ ಹರಾಜಿಗೆ ಕ್ಷಣಗಣನೆ ಶುರುವಾಗಿದೆ, ಕ್ರಿಕೆಟ್ ನ ಅತಿ ದೊಡ್ಡ ಲೀಗ್ ಹರಾಜಿನಲ್ಲಿ ಭಾಗವಹಿಸಲು ಹಲವು ಆಟಗಾರರು ಕಾಯುತ್ತಿದ್ದಾರೆ. ಆದರೆ ಈ ಭಾರಿಯ ಐಪಿಎಲ್ ನಲ್ಲಿ ಕೆಲ ದಿಗ್ಗಜ ಆಟಗಾರರು ಹರಾಜಿನಿಂದ ದೂರು ಉಳಿದು ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ.
ಇಂಗ್ಲೆಂಡ್ ನಾಯಕ ಜೋ ರೂಟ್ ಮತ್ತು ಆಲ್ ರೌಂಡರ್ ಬೆನ್ ಸ್ಟೋಕ್ಸ್. ಯೂನಿವರ್ಸ್ ಬಾಸ್ ಕ್ರಿಸ್ ಗೇಲ್, ಜೋಫ್ರಾ ಆರ್ಚರ್ ನಂತಹ ಘಟಾನುಘಟಿ ಆಟಗಾರರು ಹರಾಜಿನಲ್ಲೆ ಹೆಸರನ್ನ ನೊಂದಾಯಿಸಿಕೊಳ್ಳದೆ ಐಪಿಎಲ್ ನಿಂದ ದೂರ ಉಳಿದಿದ್ದಾರೆ.
ಐಪಿಎಲ್ ಮೆಗಾ ಹರಾಜಿನಲ್ಲಿ 1214 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 270 ಕ್ಯಾಪ್ಡ್, 903 ಅನ್‌ಕ್ಯಾಪ್ಡ್ ಮತ್ತು 41 ಅಸೋಸಿಯೇಟ್ ದೇಶಗಳ ಆಟಗಾರರು ಸೇರಿದ್ದಾರೆ. ಎಲ್ಲಾ ಆಟಗಾರರ ಪಟ್ಟಿಯನ್ನು 10 ತಂಡದ ಫ್ರಾಂಚೈಸಿಗಳಿಗೆ ಕಳುಹಿಸಲಾಗಿದೆ.
ಫೆಬ್ರವರಿ 12 ಮತ್ತು 13 ರಂದು ನಡೆಯಲಿರುವ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳಿಂದ ಶಾರ್ಟ್‌ಲಿಸ್ಟ್ ಮಾಡಿದ ಹೆಸರುಗಳನ್ನು ಬಿಡ್ಡಿಂಗ್‌ಗೆ ಹಾಕಲಾಗುತ್ತದೆ. ಬೆಂಗಳೂರಿನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.
ಈ ಬಾರಿಯ ಹರಾಜಿಗೂ ಮುನ್ನ ದೊಡ್ಡ ಆಟಗಾರರ ಹೆಸರನ್ನು ಹಿಂಪಡೆದಿರುವುದರಿಂದ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.
1 ಕ್ರಿಸ್ ಗೇಲ್
ಕ್ರಿಸ್ ಗೇಲ್ ಐಪಿಎಲ್ ಇತಿಹಾಸದಲ್ಲಿ ಹೆಚ್ಚು ಜನಪ್ರಿಯ ಆಟಗಾರ ಈ ಬಾರಿ ಅವರು ಟೂರ್ನಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮೆಗಾ ಹರಾಜಿನ ಮೊದಲು ಗೇಲ್ ತಮ್ಮ ಹೆಸರನ್ನು ಹಿಂತೆಗೆದುಕೊಂಡಿರುವುದು ಯೂನಿವರ್ಸಲ್ ಬಾಸ್ ಯುಗವು ಅಂತ್ಯಗೊಳ್ಳುತ್ತಿರುವುದು ಸೂಚಿಸುತ್ತಿದೆ ಕಳೆದ ಕೆಲವು ಐಪಿಎಲ್‌ಗಳಲ್ಲಿ ಗೇಲ್ ಅವರ ಫಾರ್ಮ್ ಕೂಡ ಉತ್ತಮವಾಗಿಲ್ಲ ಮತ್ತು ಇತ್ತೀಚಿನ ದಿನಗಳಲ್ಲಿ ಅವರು ರನ್ ಗಳಿಸಲು ಪರದಾಡುತ್ತಿರುವುದು ಕಾಣಬಹುದು. ಗೇಲ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಒಬ್ಬರಾಗಿದ್ದಾರೆ ಮತ್ತು ಪಂದ್ಯಾವಳಿಯಲ್ಲಿ ಅನೇಕ ಸ್ಮರಣೀಯ ಮತ್ತು ನಂಬಲಾಗದ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.
2013 ರಲ್ಲಿ, ಅವರು ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ ಐಪಿಎಲ್‌ನಲ್ಲಿ 175 ರನ್ ಗಳಿಸಿ ದಾಖಲೆ ಸೃಷ್ಟಿಸಿದ್ದರು. ಗೇಲ್ 142 ಐಪಿಎಲ್ ಪಂದ್ಯಗಳಲ್ಲಿ 4965 ರನ್ ಗಳಿಸಿದ್ದಲ್ಲದೆ 357 ಸಿಕ್ಸರ್ ಬಾರಿಸಿದ್ದಾರೆ. ಕಳೆದ ವರ್ಷ ಅವರು ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದರು, ಆದರೆ ಈ ಬಾರಿ ತಂಡ ಅವರನ್ನು ಉಳಿಸಿಕೊಂಡಿಲ್ಲ.
2 ಬೆನ್ ಸ್ಟೋಕ್ಸ್
ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಇಂಗ್ಲಿಷ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಕೂಡ ಈ ಬಾರಿ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಐಪಿಎಲ್ 2021 ರಲ್ಲಿ ಗಾಯದ ಕಾರಣ ಇಡೀ ಪಂದ್ಯಾವಳಿಯಿಂದ ಹೊರಗುಳಿದಿದ್ದರು. ನ್ಯೂಜಿಲೆಂಡ್ ವಿರುದ್ಧದ ತವರಿನಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ತಯಾರಿ ನಡೆಸಲು ಸ್ಟೋಕ್ಸ್ ಈಗ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಆಡಲಿದ್ದಾರೆ. ಈ ಕಾರಣ ಬೆನ್ ಸ್ಟೋಕ್ ಐಪಿ ಎಲ್ ನಿಂದ ದೂರ ಇದ್ದಾರೆ
- ಜೋ ರೂಟ್
ಇಂಗ್ಲೆಂಡ್‌ನ ಟೆಸ್ಟ್ ನಾಯಕ ಜೋ ರೂಟ್ ಕೂಡ ಟೆಸ್ಟ್ ಕ್ರಿಕೆಟ್‌ನತ್ತ ಗಮನ ಹರಿಸಲು ಮೆಗಾ ಹರಾಜಿನಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿಲ್ಲ. ಆಶಸ್‌ನಲ್ಲಿ ಹೀನಾಯ ಸೋಲಿನ ನಂತರ ಇಂಗ್ಲೆಂಡ್ ಆಟಗಾರರ ಸಂಪೂರ್ಣ ಗಮನ ಟೆಸ್ಟ್ ಕ್ರಿಕೆಟ್‌ಗೆ ಮರಳುವತ್ತ ನೆಟ್ಟಿದೆ.
- ಜೋಫ್ರಾ ಆರ್ಚರ್
ಇಂಗ್ಲೆಂಡ್‌ನ ವೇಗದ ಬೌಲರ್ ಜೋಫ್ರಾ ಆರ್ಚರ್ ಕೂಡ ಈ ಬಾರಿಯ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆರ್ಚರ್ ಮೊಣಕೈ ಗಾಯದಿಂದ ತೊಂದರೆಗೀಡಾಗಿದ್ದಾರೆ ಮತ್ತು ಕಳೆದ ವರ್ಷ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಜೋಫ್ರಾ ಅವರು ಕ್ರಿಕೆಟ್ ಕ್ಷೇತ್ರದಿಂದ ಬಹಳ ಸಮಯದಿಂದ ದೂರವಿದ್ದು, ಅವರು ಸಂಪೂರ್ಣ ಫಿಟ್ ಆಗಲು ಇನ್ನೂ ಸಮಯ ಹಿಡಿಯುತ್ತದೆ. ಇದರಿಂದಾಗಿ ಅವರು IPL 2022 ರಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ.
5 ಮಿಚೆಲ್ ಸ್ಟಾರ್ಕ್
ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಐಪಿಎಲ್ ನಲ್ಲಿ ಆಡುವ ಆಸೆ ವ್ಯಕ್ತಪಡಿಸಿದ್ದರು. ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಸಿದ್ಧತೆ ಮಾಡಿಕೊಳ್ಳಲು ಐಪಿಎಲ್‌ಗೆ ಮರಳುವುದಾಗಿ ಹೇಳಿದ್ದರು, ಆದರೆ ಈಗ ಅವರು ತಮ್ಮ ಹೆಸರನ್ನು ನೀಡಲು ನಿರಾಕರಿಸಿದ್ದಾರೆ. ಆದರೆ, ಇದಕ್ಕೆ ಕಾರಣ ಬಹಿರಂಗಪಡಿಸಿಲ್ಲ








