ಸಲ್ಮಾನ್, ಪ್ರಜ್ಞಾ ಅಭಿನಯದ ಮೈನ್ ಚಲಾ ಸಾಂಗ್ ಬಿಡುಗಡೆ..
ನಟ ಸಲ್ಮಾನ್ ಖಾನ್ ಮತ್ತು ಪ್ರಜ್ಞಾ ಜೈಸ್ವಾಲ್ ಒಟ್ಟಿಗೆ ಕಾಣಿಸಿಕೊಂಡಿರುವ ಮೇನ್ ಚಲಾ ಲವ್ ಸಾಂಗ್ ಬಿಡುಗಡೆಯಾಗಿದೆ. ಗಾಯಕ ಗುರು ರಾಂಧವ ಮತ್ತು ಲುಲಿಯಾ ವಂತೂರ್ ಅವರು ಈ ಹಾಡಿಗೆ ಧ್ವನಿಯಾಗಿದ್ದಾರೆ.
ಈ ಹಾಡನ್ನ ಸಲ್ಮಾನ್ ಖಾನ್ ಮತ್ತು ಭೂಷಣ್ ಕುಮಾರ್ ನಿರ್ಮಿಸಿದ್ದರೆ, ಶಬೀನಾ ಖಾನ್ ನಿರ್ದೇಶಿಸಿದ್ದಾರೆ, ಶಬ್ಬೀರ್ ಅಹ್ಮದ್ ಹಾಡಿನ ಸಾಹಿತ್ಯ ರಚಿಸಿದ್ದಾರೆ.
ಗಾಯಕ ಗುರು ರಾಂಧವ ಮತ್ತು ಸಲ್ಮಾನ್ ಖಾನ್ ಇನ್ಸ್ಟಾಗ್ರಾಂ ನಲ್ಲಿ ವೀಡಿಯೋ ತುಣುಕುಗಳನ್ನ ಹಂಚಿಕೊಂಡಿದ್ದಾರೆ. ಹಾಡಿನ ಗಾಯಕಿ ವಲಿಯಾ ವಂತೂರ್ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದು ಮೇನ್ ಚಲಾ ಭಾವನಾತ್ಮಕ ಗೀತೆಯಾಗಿದೆ ಇದು ಜನರನ್ನ ತಲುಪುತ್ತದೆ ಎಂಬ ನಂಬಿಕೆ ಇದೆ. ಗಾಯಕ ಗುರು ರಾಂಧವ ಅವರು ಅಧ್ಭುತ ಕಲಾವಿದ ಅವರಿಗೆ ಕೃತಜ್ಞಳಾಗಿದ್ದೇನೆ ಎಂದು ತಿಳಿಸಿದ್ದಾರೆ.
ಈ ಹಾಡನ್ನ ಯೂಟ್ಯೂಬ್ ಟಿ ಸೀರಿಸ್ ಚಾನೆಲ್ನಲ್ಲಿ ಬಿಡುಗಡೆ ಮಾಡಲಾಗಿದೆ.








