85 ವರ್ಷದ ವರ 65 ವರ್ಷದ ವಧುವಿನೊಂದಿಗೆ ವಿವಾಹ Saaksha Tv
ಮೈಸೂರು: ಪತ್ನಿಯನ್ನು ಕಳೆದುಕೊಂಡು ಒಂಟಿಯಾಗಿದ್ದ 85 ವರ್ಷದ ಅಪ್ಪನಿಗೆ ಮಕ್ಕಳು ಮದುವೆ ಮಾಡಿಸಿರುವ ಅಪರೂಪದ ಘಟನೆಯು ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಮೈಸೂರಿನ ಉದಯಗಿರಯ ಗೌಸಿಯಾ ನಗರದ ನಿವಾಸಿ ಹಾಜಿ ಮುಸ್ತಾಫ ತನ್ನ ಪತ್ನಿ ಖುರ್ಷದ ಬೇಗಂ ಅನ್ನು ಕಳೆದುಕೊಂಡಿದ್ದರು. ಇವರಿಗೆ 9 ಜನ ಮಕ್ಕಳು ಇದ್ದು ಎಲ್ಲರಿಗು ಮದುವೆಯಾಗಿದೆ. ಮಕ್ಕಳು ಉದ್ಯೋಗದ ನಿಮಿತ್ತ ಬೇರೆ ಬೇರೆ ಕಡೆ ಇದ್ದು, ವೃದ್ದ ಮುಸ್ತಾಫ ಒಬ್ಬಂಟಿಯಾಗಿದ್ದರು. ಇದನ್ನು ಕಂಡ ಮಕ್ಕಳು ಇಳಿ ವಯಸ್ಸಿನಲ್ಲಿ ಯಾರಾದರು ಜೊತೆಯಲ್ಲಿ ಆಸರೆಗೆ ಇರಬೇಕೆಂದು ಮದುವೆ ಮಾಡಲು ನಿಶ್ಚಯಿಸಿದ್ದಾರೆ.
ವಿವಾಹ ಮಾಡಲು ಮಕ್ಕಳು, ಮೊಮ್ಮಕ್ಕಳು ವಧುವಿನ ಹುಡುಕಾಟದಲ್ಲಿ ತೊಡಗಿದ್ದಾಗ ಒಂಟಿಯಾಗಿ ಜೀವನ ಸಾಗಿಸುತ್ತಿದ್ದ 65 ವರ್ಷದ ಫಾತಿಮಾ ಬೇಗಂ ಸಿಕ್ಕರು. ಆಗ ಅವರಿಗೆ ಮದುವೆಯಾಗಲು ಅನುಮತಿ ಕೇಳಿದಾಗ ಒಪ್ಪಿಗೆ ಸೂಚಿಸಿದ್ದಾರೆ. 85 ವರ್ಷದ ಹಾಜಿ ಮುಸ್ತಾಫ ಜೊತೆ 65 ವರ್ಷದ ಫಾತಿಮಾ ಬೇಗಂ ಇಬ್ಬರಿಗು ವಿವಾಹ ಮಾಡಿಸಿದ್ದಾರೆ.






