ಆಕಸ್ಮಿಕ ಬೆಂಕಿ ಅವಘಡ | ಇಬ್ಬರು ಸಜೀವ ದಹನ Saaksha Tv
ವಿಜಯಪುರ: ಪ್ಲಾಸ್ಟಿಕ್ ಅಂಗಡಿಯಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದ್ದು, ಇಬ್ಬರೂ ಸಜೀವ ದಹನವಾಗಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ನಿನ್ನೆ ತಡರಾತ್ರಿ ನಿಡಗುಂದಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರ ಬಸವನ ಬಾಗೇವಾಡಿ ಕ್ರಾಸ್ ಬಳಿಯ ಪ್ಲಾಸ್ಟಿಕ್ ಅಂಗಡಿಗೆ ಬೆಂಕಿ ತಗುಲಿದೆ. ಬೆಂಕಿಯ ಕೆನ್ನಾಲಿಗೆ ಕೆಲವೇ ಕ್ಷಣಗಳಲ್ಲಿ ಸಂಪೂರ್ಣ ಅಂಗಡಿಯನ್ನ ಆವರಿಸಿದೆ. ಪರಿಣಾಮ ಅಂಗಡಿಯಲ್ಲಿ ಮಲಗಿದ್ದವರು ಹೊರ ಬರಲಾಗದೆ ಸಜೀವಾಗಿ ದಹನವಾಗಿದ್ದಾರೆ. ಮೃತರನ್ನು 25 ವರ್ಷದ ಅಶೋಕ ದೇಸ್ನೂಯಿ, 36 ವರ್ಷದ ಲಿಂಬಾರಾಮ ದೇಸ್ನೂಯಿ ಎಂದು ಗುರುತಿಸಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸ್ಥಳದಲ್ಲೆ ಸಾಲು ಸಾಲಾಗಿದ್ದ ಏಳೆಂಟು ಪ್ಲಾಸ್ಟಿಕ್ ಅಂಗಡಿಗಳನ್ನು ಬೆಂಕಿಗಾಹುತಿಯಾಗುವುದನ್ನು ಅಗ್ನಿಶಾಮಕ ದಳ ಸಿಬ್ಬಂದಿ ತಪ್ಪಿಸಿದ್ದಾರೆ. ಸ್ಥಳಕ್ಕೆ ನಿಡಗುಂದಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.








