ದಾಖಲೆಯ ಸನಿಹದಲ್ಲಿ ಯಜುವೇಂದ್ರ ಚಾಹಲ್..
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಸೋತಿರುವ ಟೀಂ ಇಂಡಿಯಾ, ಮಾನ ಉಳಿಸಿಕೊಳ್ಳಲು ಮೂರನೇ ಏಕದಿನ ಪಂದ್ಯದಲ್ಲಿ ಸೆಣಸಾಡುತ್ತಿದೆ.
ಕೇಪ್ ಟೌನ್ ನಲ್ಲಿ ನಡೆಯುತ್ತಿರುವ ಅಂತಿಮ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು, ಬೌಲಿಂಗ್ ಆಯ್ದುಕೊಂಡಿದೆ. ಪಂದ್ಯಕ್ಕಾಗಿ ಭಾರತದಲ್ಲಿ ನಾಲ್ಕು ಬದಲಾವಣೆಗಳನ್ನು ಮಾಡಲಾಗಿದೆ.
ಕಳೆದ ಎರಡೂ ಪಂದ್ಯಗಳಲ್ಲಿ ವಿಕೆಟ್ ಪಡೆಯಲು ಪರದಾಡಿದ ಯಜುವೇಂದ್ರ ಚಹಾಲ್, ಈ ಪಂದ್ಯದಲ್ಲೂ ಸ್ಥಾನ ಪಡೆದಿದ್ದು, ಇನ್ನೊಂದು ವಿಕೆಟ್ ಪಡೆದರೇ ಅಪರೂಪದ ದಾಖಲೆ ನಿರ್ಮಿಸಲಿದ್ದಾರೆ.
ಇಂದಿನ ಪಂದ್ಯದಲ್ಲಿ ಚಾಹಲ್ ಒಂದೇ ಒಂದು ವಿಕೆಟ್ ಪಡೆದರೆ, ದಕ್ಷಿಣ ಆಫ್ರಿಕಾ ನೆಲದಲ್ಲಿ ಪ್ರೋಟೀಸ್ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳಲಿದ್ದಾರೆ.
ಚಾಹಲ್ ಸದ್ಯ ಆಫ್ರಿಕಾ ನೆಲದಲ್ಲಿ 17 ವಿಕೆಟ್ ಪಡೆದಿದ್ದು, ಚೈನಾಮೆನ್ ಬೌಲರ್ ಕುಲದೀಪ್ ಯಾದವ್ ಜೊತೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.
ಈ ಪಂದ್ಯದಲ್ಲಿ ಚಾಹಲ್ ಒಂದು ವಿಕೆಟ್ ಪಡೆದರೇ ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತದ ಪರ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳಲಿದ್ದಾರೆ.
ಅದೇ ರೀತಿ ಇನ್ನೂ ಎರಡು ವಿಕೆಟ್ ಪಡೆದರೆ 100 ವಿಕೆಟ್ ಕ್ಲಬ್ ಸೇರಲಿದ್ದಾರೆ. ಇತ್ತ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 3000 ರನ್ ಕ್ಲಬ್ ಸೇರಲು 12 ರನ್ ಗಳನ್ನು ಗಳಿಸಬೇಕಿದೆ.









