ಕೋವಿಡ್ ಅಲೆಯಿಂದಾಗಿ ತಮ್ಮ ಮದುವೆ ರದ್ದು ಮಾಡಿಕೊಂಡ ನ್ಯೂಜಿಲ್ಯಾಂಡ್ ಪ್ರಧಾನಿ
ಕೋವಿಡ್ -19 ಓಮಿಕ್ರಾನ್ ರೂಪಾಂತರ ಸಮುದಾಯಕ್ಕೆ ಹರಡುವುದನನ್ನ ತಡೆಯಲು ನ್ಯೂಜಿಲ್ಯಾಂಡ್ ಹಲವು ನಿರ್ಬಂಧಗಳನ್ನು ವಿಧಿಸಿದೆ, ಇದನ್ನ ಫಾಲೋ ಮಾಡಲು ಸ್ವತಃ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆನ್ ತಮ್ಮ ವಿವಾಹವನ್ನು ರದ್ದುಗೊಳಿಸಿದ್ದಾರೆ.
ನ್ಯೂಜಿಲ್ಯಾಂಡ್ ಪ್ರಧಾನಿ ಜೆಸಿಂದ್ ಅರ್ಡೆನ್ ಅವರು ತಮ್ಮ ಜೊತೆಗಾರ ಕ್ಲಾರ್ಕ್ ಗೆಫಾರ್ಡ್ ಜೊತೆ ವಿವಾಹವನ್ನ ನಿಶ್ಚಯ ಮಾಡಿಕೊಂಡಿದ್ದರು. ಮುಂದಿನ ದಿನಗಳಲ್ಲಿ ಮದುವೆಗೆ ಸಿದ್ದತೆ ನಡೆಸಿದ್ದರು, ಸೋಂಕು ಹೆಚ್ಚಾದ ಹಿನ್ನಲೆಯಲ್ಲಿ ರಾಷ್ಟ್ರದಲ್ಲಿ ಕಠಿಣ ನಿಯಮಗಳನ್ನ ಹೇರಲಾಗಿದೆ, ಹಿಗಾಗಿ ಸ್ವತಃ ಜೆಸಿಂದಾ ಅವರೆ ತಮ್ಮ ಮದುವೆಯನ್ನ ರದ್ದುಗೊಳಿಸಿದ್ದಾರೆ.
ಕ್ಲಾರ್ಕ್ ಗೇಫೋರ್ಡ್ ಅವರ ಜೊತೆಗಿನ ವಿವಾಹವನ್ನು ರದ್ದುಗೊಳಿಸುವುದರ ಬಗ್ಗೆ ಪತ್ರಕರ್ತರು ಕೇಳಿದಾಗ, ಅದೇ ಜೀವನ ಎಂದು ಉತ್ತರಿಸಿದ್ದಾರೆ.
ಸಾಂಕ್ರಾಮಿಕ ರೋಗದಿಂದಾಗಿ ಪರಿಣಾಮಗಳನ್ನ ಎದುರಿಸುತ್ತಿರುವ ಸಾವಿರಾರು ನ್ಯೂಜಿಲ್ಯಾಂಡ್ ಪ್ರಜೆಗಳಿಗಿಂತ ನಾನು ಬಿನ್ನವಾಗಿಲ್ಲ, ಸಾಂಕ್ರಾಮಿಕತೆಯಿಂತ ಪ್ರೀತಿ ಪಾತ್ರರ ಜೊತೆ ಇರಲಾಗದಂಹ ಸ್ಥಿತಿ ನೋವು ನೀಡುತ್ತಿದೆ. ಎಂದು ಸೋಂಕಿನ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.
ನ್ಯೂಜಿಲ್ಯಾಂಡ್ನಲ್ಲಿ ಕೋವಿಡ್ ನಿಯಮಗಳನ್ನ ಕಟ್ಟು ನಿಟ್ಟಾಗಿ ಆಚರಿಸುತ್ತಿದ್ದು, ವಿವಾಹ ಸಮಾರಂಭಗಳಿಗೆ ಸಂಪೂರ್ಣ ಕೋವಿಡ್ ಲಸಿಕೆ ಪಡೆದ 100 ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ.








