ತೆಲಂಗಾಣ : ಬಿರುಗಾಳಿ ಹೊಡೆತಕ್ಕೆ ಸಿಲುಕಿ ಬೃಹತ್ ಮರಗಳು ಧರೆಗುರುಳೋ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಆದರೆ ಬಸ್ ವೊಂದು ಗಾಳಿಯ ಹೊಡೆತಕ್ಕೆ ಸಿಲುಕಿ ತಾನಿದ್ದ ಜಾಗದಿಂದ ನೂರಾರು ಮೀಟರ್ ದೂರ ಹೋಗಿದ್ದನ್ನ ನೋಡಿದ್ದೀರಾ?
ಇಂಥದ್ದೊಂದು ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯ ಸಾತುಪಲ್ಲಿ ಗ್ರಾಮದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಸಾತುಪಲ್ಲಿಯಲ್ಲಿ ಚಾಲಕ ಖಾಲಿ ಬಸ್ ನ ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಹೋಗಿದ್ದ. ಈ ವೇಳೆ ಇದ್ದಕ್ಕಿದ್ದಂತೆ ಬಿರುಗಾಳಿ ಬೀಸಿದ್ದು, ಗಾಳಿಯ ಹೊಡೆತಕ್ಕೆ ಸಿಲುಕಿದ ಬಸ್, ನಿಲ್ಲಿಸಿದ್ದ ಸ್ಥಳದಿಂದ ಹಿಮ್ಮುಖವಾಗಿ 200 ಮೀಟರ್ ದೂರ ಹೋಗಿದೆ. ನಂತರ ರಸ್ತೆಯ ಇನ್ನೊಂದು ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ.
#Watch
Gusty winds lashed out at sathupalli village of Khamam district in
A bus parked at road side moved 200 metres backward due to wind force.
तेलंगाना में तेज हवाओं ने भारी भरकम बस को पीछे की ओर धकेल दिया। @AnkurSh20921913@meenakshisharan@rose_k01@Kaushik39352170
💨🌬️😷🇮🇳 pic.twitter.com/bHIgB4bHFk— Padmanabh Gadkari 🇮🇳⛳ (@PadmanabhGadka1) May 17, 2020
ಈ ದೃಶ್ಯವನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.