ಧರ್ಮ ಸಂಸದ್ ಆಯೋಜನೆ – ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹಿಂದೂ ಸಂಘಟನೆಗಳು…
ಧರ್ಮ ಸಂಸದ್ ಆಯೋಜನೆ ಮಾಡುವುದನ್ನ ಇನ್ನೊಂದು ಧರ್ಮದ ವಿರುದ್ದ ಎಂದು ಪರಿಗಣಿಸಬೇಕಿಲ್ಲ ಎಂದು ಹಿಂದೂ ಸಂಘಟನೆಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ. ಹಿಂದು ಸೇನಾ ಹಾಗು ಹಿಂದೂ ಫ್ರಂಟ್ ಫಾರ್ ಜಸ್ಟೀಸ್ ಎಂಬ ಸಂಘಟನೆಗಳು ಸುಪ್ರೀಂ ಕೋರ್ಟ್ ಕದ ತಟ್ಟಿವೆ.
ನವದೆಹಲಿ ಮತ್ತು ಹರಿದ್ವಾರಗಳಲ್ಲಿ ನಡೆದ ಧರ್ಮ ಸಂಸದ್ ಗಳಲ್ಲಿ ಅನ್ಯ ಧರ್ಮದ ವಿರುದ್ಧ ದ್ವೇಷ ಪೂರಿತ ಭಾಷಣ ನಡೆಸಿದ್ದರು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ಆಯೋಜಕರಿಗೆ ನೊಟೀಸ್ ನೀಡಿತ್ತು.
ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಮುಸ್ಲೀಂ ಸಮುದಾಯದ ವಿರುದ್ಧ ದ್ವೇಷ ಪೂರ್ಣ ಭಾಷಣ ಮಾಡಲಾಗಿದೆ ಎಂದು ಪತ್ರಕರ್ತ ಕುರ್ಬಾನ್ ಆಲಿ ಪಿ ಐ ಎಲ್ ಸಲ್ಲಿಸಿದ್ದರು.
ಇದಕ್ಕೆ ಮಧ್ಯ ಪ್ರವೇಶಿಸಿರುವ ಹಿಂದೂ ಸಂಘಟನೆಗಳು ಹಿಂದೂ ಧರ್ಮದ ಅವಹೇಳನ ಮಾಡಿದವರ ವಿರುದ್ದವು ದೂರು ದಾಖಲಿಸಲು ನಿರ್ದೇಶಿಸಬೇಕು ಎಂದು ಸುಪ್ರೀಂ ಗೆ ಮನವಿ ಮಾಡಿದ್ದಾರೆ
ದೇಶದ ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನ ಆಚರಿಸುವ, ಪ್ರಚಾರ ಮಾಡುವ ಸ್ವಾತಂತ್ರ್ಯವಿದೆ. ಆದ್ದರಿಂದ ಹಿಂದೂಗಳು ಧರ್ಮ ಸಂಸದ್ ಆಯೋಜನೆ ಮಾಡುವುದಕ್ಕೆ ಸಂವಿಧಾನವೇ ರಕ್ಷಣೆ ನೀಡಿದೆ ಎಂದು ಹಿಂದು ಸಂಘಟನೆಗಳು ಹೇಳಿವೆ…