Match Fixing | ಭಾರತದ ಉದ್ಯಮಿಯಿಂದ ಟೇಲರ್ ಗೆ ಫಿಕ್ಸಿಂಗ್ ಆಫರ್
ಜಿಂಬಾಬ್ವೆ ಪರ ಅತಿ ಹೆಚ್ಚು ಶತಕ (17) ಬಾರಿಸಿದ ದಾಖಲೆ ಹೊಂದಿರುವ ಜಿಂಬಾಬ್ವೆಯ ಮಾಜಿ ನಾಯಕ ಬ್ರೆಂಡನ್ ಟೇಲರ್ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಸಂಚಲನಾತ್ಮಕ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. Brendan Taylor Indian bizman blackmailed spot-fix saaksha tv
2019 ರಲ್ಲಿ, ಭಾರತೀಯ ಉದ್ಯಮಿಯೊಬ್ಬರು ಟ್ವಿಟರ್‌ನಲ್ಲಿ ತಮಗೆ ಮ್ಯಾಚ್ ಫಿಕ್ಸಿಂಗ್ ಬೆದರಿಕೆ ಹಾಕಿದ್ದರಂತೆ.
ಅದಕ್ಕೆ $ 15,000 ಅಮೆರಿಕನ್ ಡಾಲರ್ ಆಫರ್ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಅಂದಿನ ಆರ್ಥಿಕ ಪರಿಸ್ಥಿತಿಯ ಕಾರಣದಿಂದಾಗಿ ಆ ವ್ಯಕ್ತಿಯಿಂದ ಸ್ವಲ್ಪ ನಗದನ್ನು ಸಹ ತೆಗೆದುಕೊಂಡಿದ್ದಾಗಿ ಟೇಲರ್ ಒಪ್ಪಿಕೊಂಡಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಟೇಲರ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
2019 ರಲ್ಲಿ ಭಾರತದ ವ್ಯಾಪಾರಸ್ಥನ ಆಹ್ವಾನದ ಮೇರೆಗೆ ಭಾರತಕ್ಕೆ ಬಂದಿದ್ದಾಗಿ, ಆ ಸಂದರ್ಭದಲ್ಲಿ ಪಾರ್ಟಿಯೊಂದರಲ್ಲಿ ಟೇಲರ್ ಗೆ ಕೆಲವರು ಕೊಕೇನ್ ಆಫರ್ ಮಾಡಿದ್ದಾಗಿ, ತಾನು ಕೊಕೇನ್ ಸೇವಿಸುತ್ತಿದ್ದಾಗ ವಿಡಿಯೋ ಮಾಡಿ ಬೆದರಿಕೆ ಮಾಡಿದ್ದಾಗಿ ಈ ಕ್ರಮದಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡುವಂತೆ ಬೆದರಿಸಿದ್ದಾಗಿ ಟೇಲರ್ ಸಂಚಲನ ಹೇಳಿಕೆ ನೀಡಿದ್ದಾರೆ.
ಜಿಂಬಾಬೈ ನಲ್ಲಿ ಟಿ 20 ಲೀಗ್ ಅನ್ನು ಪ್ರಾರಂಭಿಸಲು ಆ ಉದ್ಯಮಿಯನ್ನು ಸಂಪರ್ಕಿಸಿದ್ದೆ. ಆಗ ಆರು ತಿಂಗಳಿನಿಂದ ನಮಗೆ ನಮ್ಮ ಕ್ರಿಕೆಟ್ ಬೋರ್ಡ್ ಸಂಬಳ ನೀಡಿರಲಿಲ್ಲ. ಆಗ ನನ್ನ ಆರ್ಥಿಕ ಪರಿಸ್ಥಿತಿಯನ್ನು ಎನ್ ಕ್ಯಾಚ್ ಮಾಡಿಕೊಂಡು ಕೆಲವು ವ್ಯಕ್ತಿಗಳು ಫಿಕ್ಸಿಂಗ್ ಗೆ ಒತ್ತಾಯಿಸಿದ್ದರು. ಅದಕ್ಕೆ ನಾನು ಒಪ್ಪದೇ ಇದ್ದಾಗ ಬ್ಲಾಕ್ ಮೇಲ್ ಮಾಡಿದ್ರು ಎಂದು ಟೇಲರ್ ತಮ್ಮ ಹೇಳಿಕೆಯನ್ನು ತಿಳಿಸಿದ್ದಾರೆ.









