ವಿಶ್ವದ ದೊಡ್ಡ ಮರುಭೂಮಿ ಸಹಾರಾ ಅಲ್ಲ..! ಚಂದ್ರನ ಮೇಲೆ ಸಕ್ರಿಯ ಜ್ವಾಲಾಮುಖಿಗಳಿದ್ದವಂತೆ..! Interesting Facts
ಬೈಸನ್ ಹೈಬ್ರಿಡ್ ಹಸುವನ್ನ ಬೀಫಾಲೋ ಎಂದು ಕರೆಯಲಾಗುತ್ತದೆ
ಸ್ಕಾಟ್ಲೆಂಡ್ ನಲ್ಲಿ ಹಿಮ ಉಚ್ಚಾರಣೆಗೆ 421 ಪದಗಳಿವೆ
ಕೆಲವು ಆಕ್ಟೋಪಸ್ ಜಾತಿಗಳು ಒಂದು ಬಾರಿಗೆ 56,000 ಮೊಟ್ಟೆಗಳನ್ನು ಇಡುತ್ತವೆ – ಸರಾಸರಿಯಾಗಿ, ಒಂದು ದೈತ್ಯ ಪೆಸಿಫಿಕ್ ಆಕ್ಟೋಪಸ್ ಗರ್ಭಧಾರಣೆಯ ಕೊನೆಯಲ್ಲಿ ಸುಮಾರು ಒಂದು ತಿಂಗಳ ಅವಧಿಯಲ್ಲಿ 56,000 ಮೊಟ್ಟೆಗಳನ್ನು ಇಡುತ್ತದೆ ಎಂದು NPR ವರದಿಯಿಂದ ತಿಳಿದುಬಂದಿದೆ.
ನೀಲಿ ತಿಮಿಂಗಿಲಗಳು ಒಂದು ಸಮಯಕ್ಕೆ ಒಂದೇ ಸರತಿ ಅರ್ಧ ಮಿಲಿಯನ್ ಕ್ಯಾಲೋರಿಗಳನ್ನು ತಿನ್ನುತ್ತವೆ. ಅಂದ್ರೆ ಸುಮಾರು 457,000 ಕ್ಯಾಲೋರಿಗಳನ್ನ ತಿಮಿಂಗಿಲ ಒಂದು ಸರತಿಗೆ ಬಾಯಿಗೆ ತೆಗೆದುಕೊಳ್ಳುತ್ತದೆ.
ಜೀನ್ಸ್ ನ ನಲ್ಲಿ ಸಾಮಾನ್ಯವಾಗಿ ಕೊಡುವ ಚಿಕ್ಕ ಪಾಕೆಟ್ ಅನ್ನು ಪಾಕೆಟ್ ವಾಚ್‌ಗಳನ್ನು ಸಂಗ್ರಹಿಸಲು ವಿನ್ಯಾಸಗೊಳಿಸಲಾಗಿದೆ.
ಮೂಲ ಜೀನ್ಸ್ ಕೇವಲ ನಾಲ್ಕು ಪಾಕೆಟ್ ಗಳನ್ನು ಹೊಂದಿತ್ತು : ಆ ಚಿಕ್ಕ ಪಾಕೆಟ್, ಜೊತೆಗೆ ಮುಂಭಾಗದಲ್ಲಿ ಎರಡು ಮತ್ತು ಹಿಂಭಾಗದಲ್ಲಿ ಕೇವಲ ಒಂದು ಪಾಕೆಟ್ ಇದ್ದು ಅದನ್ನ ಪಾಕೆಟ್ ವಾಚ್ ಗಾಗಿ ಮಾಡಲಾಗಿತ್ತು..
ಪ್ರಸ್ತುತ ಅಮೇರಿಕನ್ ಧ್ವಜವನ್ನು ವಿನ್ಯಾಸಗೊಳಿಸಿದ್ದು ಹೈಸ್ಕೂಲ್ ವಿದ್ಯಾರ್ಥಿ ವಿನ್ಯಾಸಗೊಳಿಸಿದ್ದಾರೆ
ಹಸುಗಳಿಗೆ ಮೇಲಿನ ಮುಂಭಾಗದ ಹಲ್ಲುಗಳಿರುವುದಿಲ್ಲ..
interesting facts – random true facts – world – saakshatv
ಸಹಾರಾ ಮರುಭೂಮಿಯ ಕಾಲು ಭಾಗ ಮಾತ್ರ ಮರಳಿನಿಂದ ಕೂಡಿದೆ – ಹೆಚ್ಚಿನ ಭಾಗವು ಜಲ್ಲಿಕಲ್ಲುಗಳಿಂದ ಮುಚ್ಚಲ್ಪಟ್ಟಿದೆ. ಆದರೂ ಇದು ಪರ್ವತಗಳು ಮತ್ತು ಓಯಸಿಸ್ಗಳನ್ನು ಒಳಗೊಂಡಿದೆ. ಮತ್ತು ಅನೇಕರು ತಪ್ಪಾಗಿ ತಿಳಿದಿರುವ ಮತ್ತೊಂದು ಭೌಗೋಳಿಕ ಸಂಗತಿ ಇದು ವಿಶ್ವದ ಅತಿದೊಡ್ಡ ಮರುಭೂಮಿಯೆಂದು. ಆದ್ರೆ ವಿಶ್ವದ ಅತಿದೊಡ್ಡ ಮರುಭೂಮಿ ಅಂಟಾರ್ಟಿಕಾ ಆಗಿದೆ.
ಡೈನೋಸಾರ್ ಗಳು ಜೀವಂತವಾಗಿದ್ದಾಗ ಚಂದ್ರನ ಮೇಲೆ ಸಕ್ರಿಯ ಜ್ವಾಲಾಮುಖಿಗಳಿದ್ದವು ಎನ್ನಲಾಗಿದೆ – ಹೆಚ್ಚಿನ ಜ್ವಾಲಾಮುಖಿಗಳು ಬಹುಶಃ ಸುಮಾರು ಒಂದು ಶತಕೋಟಿ ವರ್ಷಗಳ ಹಿಂದೆ ಸ್ಫೋಟಗೊಳ್ಳುವುದನ್ನು ನಿಲ್ಲಿಸಿದವು, ಆದರೆ ಡೈನೋಸಾರ್ ಗಳು ಇದ್ದಾಗ 100 ಮಿಲಿಯನ್ ವರ್ಷಗಳ ಹಿಂದೆ ಸಕ್ರಿಯ ಲಾವಾ ಹರಿವು ಇದ್ದಿರಬಹುದು ಎಂದು NASA ಸಂಶೋಧನೆಗಳು ಸೂಚಿಸಿವೆ.
# ಚಿಹ್ನೆಯನ್ನು ಅಧಿಕೃತವಾಗಿ ಹ್ಯಾಶ್‌ಟ್ಯಾಗ್ ಅಥವಾ ಪೌಂಡ್ ಎಂದು ಕರೆಯಲಾಗುವುದಿಲ್ಲ – ಇದರ ತಾಂತ್ರಿಕ ಹೆಸರು ಆಕ್ಟೋಥೋರ್ಪ್. “ಆಕ್ಟೋ” ಎಂದರೆ “ಎಂಟು” ಮತ್ತು ಅದರ ಬಿಂದುಗಳನ್ನು ಸೂಚಿಸುತ್ತದೆ. ಕೆಲವರು ಇದನ್ನು ಒಲಿಂಪಿಯನ್ ಜಿಮ್ ಥೋರ್ಪ್ ಅವರ ಹೆಸರನ್ನು ಇಡಲಾಗಿದೆ ಎಂದು ಹೇಳುತ್ತಾರೆ, ಆದರೆ ಇತರರು ಇದು ಕೇವಲ ಅಸಂಬದ್ಧ ಎಂದು ವಾದಿಸುತ್ತಾರೆ.
ಜಿರಾಫೆಯ ನಾಲಿಗೆ 20 ಇಂಚು ಉದ್ದವಿರಬಹುದು – ಅವುಗಳ ಗಾಢವಾದ, ನೀಲಿ-ಕಪ್ಪು ಬಣ್ಣವು ಬಹುಶಃ ಸನ್ಬರ್ನ್ ಅನ್ನು ತಡೆಗಟ್ಟುತ್ತದೆ.
ಕನಸು ಕಾಣುವ ಪ್ರಾಣಿಗಳು ಮನುಷ್ಯರಷ್ಟೇ ಅಲ್ಲ
ಇಲಿಗಳು ಆಹಾರಕ್ಕೆ ಹೋಗುವ ಅಥವಾ ಜಟಿಲಗಳ ಮೂಲಕ ಓಡುವ ಕನಸು ಕಾಣುತ್ತವೆ ಎಂದು ಅಧ್ಯಯನಗಳು ಸೂಚಿಸಿವೆ. ಹೆಚ್ಚಿನ ಸಸ್ತನಿಗಳು ಕೂಡ ಮನುಷ್ಯರ ರೀತಿಯಲ್ಲೇ ಕನಸು ಕಾಣುತ್ತವೆ ಎನ್ನಲಾಗಿದೆ.
ಜೇನುನೊಣಗಳು ಮೌಂಟ್ ಎವರೆಸ್ಟ್ ಗಿಂತ ಎತ್ತರಕ್ಕೆ ಹಾರಬಲ್ಲವು – ನ್ಯಾಷನಲ್ ಜಿಯಾಗ್ರಫಿಕ್ ಪ್ರಕಾರ, ಜೇನುನೊಣಗಳು ಸಮುದ್ರ ಮಟ್ಟದಿಂದ 29,525 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ಹಾರಬಲ್ಲವು. ಇದು ವಿಶ್ವದ ಅತಿ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟ್‌ಗಿಂತ ಎತ್ತರವಾಗಿ ಹಾರಬಹುದು ಎನ್ನಲಾಗಿದೆ.








