ವಾಷಿಂಗ್ಟನ್, ಮೇ 18 : ದಕ್ಷಿಣ ಗಡಿಭಾಗದ ಮೆಕ್ಸಿಕೋದಿಂದ ಕಾನೂನು ಬಾಹಿರವಾಗಿ ದೇಶದೊಳಗೆ ಆಗಮಿಸಿದ ಸುಮಾರು 161 ಭಾರತೀಯ ಪ್ರಜೆಗಳನ್ನು ಅಮೆರಿಕ ಗಡಿಪಾರು ಮಾಡಿರುವುದಾಗಿ ವರದಿಗಳು ತಿಳಿಸಿದೆ.
ಪಂಜಾಬ್ ನ 56, ತೆಲಂಗಾಣ, ಕೇರಳ, ತಮಿಳುನಾಡಿನ ತಲಾ ಇಬ್ಬರು, ಉತ್ತರಪ್ರದೇಶದ 5, ಹರಿಯಾಣದ 76 ಮಂದಿ, ಗುಜರಾತ್ ನ 12, ಮಹಾರಾಷ್ಟ್ರದ 4, ಗೋವಾ ಹಾಗೂ ಆಂಧ್ರಪ್ರದೇಶದ ಒಬ್ಬರನ್ನು ಗಡಿಪಾರು ಮಾಡಲಾಗಿದ್ದು, ಎಲ್ಲರನ್ನೂ ಪಂಜಾಬ್ ನ ಅಮೃತಸರಕ್ಕೆ ವಿಶೇಷ ವಿಮಾನದಲ್ಲಿ ಕಳುಹಿಸಿ ಕೊಡಲಾಗಿದೆ.
ಉತ್ತರ ಅಮೆರಿಕನ್ ಪಂಜಾಬಿ ಅಸೋಸಿಯೇಷನ್ ನ ಕಾರ್ಯಕಾರಿ ನಿರ್ದೇಶಕ ಸಟ್ನಾಮ್ ಸಿಂಗ್, ಆಕ್ರಮವಾಗಿ ಅಮೆರಿಕಕ್ಕೆ ಪ್ರವೇಶ ಮಾಡಿರುವ 1,739 ಭಾರತೀಯರು ಅಮೆರಿಕದ 95 ಜೈಲುಗಳಲ್ಲಿ ಇದ್ದಾರೆ ಎಂದು ಹೇಳಿದ್ದಾರೆ. 2018ರಲ್ಲಿ ಅಮೆರಿಕ 611 ಭಾರತೀಯರನ್ನು ಗಡಿಪಾರು ಮಾಡಿತ್ತು ಎಂದು ಐಸಿಇ ವರದಿಗಳು ಹೇಳಿದ್ದರೆ, ಈ ವರ್ಷ ಮೂವರು ಮಹಿಳೆಯರು ಸೇರಿದಂತೆ 161 ಜನರನ್ನು ಗಡಿಪಾರು ಮಾಡಲಾಗಿದೆ ಎಂದು ಎನ್.ಎ.ಪಿ.ಎ ತಿಳಿಸಿದೆ.
80 ಲಕ್ಷದ ವಾಚ್ ಅಲ್ಲ ಇದು ಅಂಬೇಡ್ಕರ್ ಚಿತ್ರವಿರುವ ಎಚ್ ಎಂಟಿ ವಾಚ್ ಅನುಮಾನವಿದ್ದರೆ ಮನೆಗೆ ಎಸ್‌ಐಟಿ ಕಳಿಸಿ ಎಂದು ಕುಮಾರಸ್ವಾಮಿ ಸವಾಲು
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಐಷಾರಾಮಿ ವಾಚ್ ಗಳ ಬಗ್ಗೆ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ತಮ್ಮದೇ ಶೈಲಿಯಲ್ಲಿ ಖಡಕ್ ತಿರುಗೇಟು ನೀಡಿದ್ದಾರೆ. ಇತ್ತೀಚೆಗೆ...








