ವಿರಾಟ್ – ದಾದಾ ಜಗಳಕ್ಕೆ `ಮುಲಾಮು’ ಹೇಳಿದ ಕಪಿಲ್ ಜೀ
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಅನ್ನೋದು ಸದ್ಯ ಜಗತ್ ಜಾಹೀರಾಗಿರುವ ವಿಚಾರವಾಗಿದೆ. ತಮ್ಮಿಬ್ಬರ ಮಧ್ಯೆ ಯಾವುದೇ ಮನಸ್ತಾನ ಇಲ್ಲವೆಂದೂ ಗಂಗೂಲಿ ಸ್ಪಷ್ಟಪಡಿಸಿದ್ರೂ, ಬೂದಿ ಮುಚ್ಚಿದ ಕೆಂಡದಂತೆ ಇಬ್ಬರ ಮುಸುಕಿ ಗುದ್ದಾಟಕ್ಕೆ ಕುರುಹುಗಳು ಸಿಗುತ್ತಲೇ ಇವೆ.
ಇದೀಗ ಈ ಇಬ್ಬರ ಶೀತಲ ಸಮರದ ಬಗ್ಗೆ ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಪ್ರತಿಕ್ರಿಯೆ ನೀಡಿದ್ದಾರೆ. ”ಕೊಹ್ಲಿ ಮತ್ತು ಗಂಗೂಲಿ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ಸುದ್ದಿಯ ಬಗ್ಗೆ ಅವರಿಬ್ಬರು ಫೋನ್‌ನಲ್ಲಿ ಮಾತನಾಡಿಕೊಂಡರೇ ಒಳ್ಳೆಯದು. ಭಾರತೀಯ ಕ್ರಿಕೆಟ್ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಈ ಸಮಸ್ಯೆಯನ್ನು ಆದಷ್ಟು ಬೇಗ ಕೊನೆಗೊಳಿಸಬೇಕು ಎಂದಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಒಂದು ದಿನ ಮೊದಲು ಮಾಧ್ಯಮಗಳ ಮುಂದೆ ಬಂದಿದ್ದ ಕೊಹ್ಲಿ ಏಕದಿನ ನಾಯಕತ್ವದ ಪದಚ್ಯುತಿ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಟಿ20 ನಾಯಕತ್ವಕ್ಕೆ ರಾಜೀನಾಮೆ ನೀಡಿದಾಗ ಯಾರೂ ತನ್ನನ್ನು ಸಂಪರ್ಕಿಸಿಲ್ಲ ಎಂದಿದ್ದರು. ಹೇಳದೇ ಕೇಳದೇ ಏಕದಿನ ನಾಯಕತ್ವದಿಂದ ವಜಾ ಮಾಡಲಾಗಿದೆ ಎಂದು ಆರೋಪಿಸಿದ್ದರು.









