ಟಾಟಾ ಕಂಪನಿಗೆ ಪ್ರತಿಷ್ಠಿತ ಏರ್ ಇಂಡಿಯಾ ಹಸ್ತಾಂತರ
69 ವರ್ಷದ ಬಳಿಕ ಟಾಟಾ ಮಡಿಲಿಗೆ ಏರ್ ಇಂಡಿಯಾ
ಟಾಟಾ ಕಂಪನಿಯ ಮುಖ್ಯಸ್ಥ ಚಂದ್ರಶೇಖರನ್ – ಮೋದಿ ಭೇಟಿ
ಬಿಡ್ ನಲ್ಲಿ ಏರ್ ಇಂಡಿಯಾವನ್ನ ತನ್ನದಾಗಿಸಿಕೊಂಡಿದ್ದ ಟಾಟಾ ಕಂಪನಿ
ಟಾಟಾ ಕಂಪನಿಯ ತೆಕ್ಕೆಯಲ್ಲಿ ಮೂರು ಏರ್ ಲೈನ್ಸ್
ಬರೋಬ್ಬರಿ 69 ವರ್ಷಗಳ ಬಳಿಕ ಪ್ರತಿಷ್ಠಿತ ಏರ್ ಇಂಡಿಯಾ ಟಾಟಾ ಕಂಪನಿಗೆ ಹಸ್ತಾಂತರವಾಗಿದೆ.
ನಷ್ಟದಲ್ಲಿದ್ದ ಏರ್ ಇಂಡಿಯಾವನ್ನು ಕೇಂದ್ರ ಸರ್ಕಾರ ಕಳೆದ ವರ್ಷ ಅಕ್ಟೋಬರ್ ನಲ್ಲಿ ಹರಾಜಿಗಿಟ್ಟಿತ್ತು. ಈ ವೇಳೆ ಟಾಟಾ ಕಂಪನಿಯೂ ಬಿಡ್ ನಲ್ಲಿ ಏರ್ ಇಂಡಿಯಾವನ್ನು ತನ್ನದಾಗಿಸಿಕೊಂಡಿತ್ತು. ಇಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಟಾಟಾ ಕಂಪನಿಗೆ ಹಸ್ತಾಂತರ ಮಾಡಿದೆ. ಇದಕ್ಕೆ ಟಾಟಾ ಕಂಪನಿಯ ಮುಖ್ಯಸ್ಥ ಚಂದ್ರಶೇಖರನ್ ಕೂಡ ಸಾಕ್ಷಿಯಾಗಿದ್ದಾರೆ. ಟಾಟಾ ಕಂಪನಿಯ ಮುಖ್ಯಸ್ಥ ಚಂದ್ರಶೇಖರನ್ ಇಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾಗುತ್ತಿದ್ದಾರೆ.
ಇತ್ತ ಏರ್ ಇಂಡಿಯಾ ಟಾಟಾ ಕಂಪನಿ ಕೈ ಸೇರಿರುವುದರಿಂದ ಏರ್ ಇಂಡಿಯಾ ಸೇವೆಯಲ್ಲಿ ಸುಧಾರಣೆಯೊಂದಿಗೆ ಯಶಸ್ಸಿನ ಹಾದಿಯಲ್ಲಿ ಹಾರಾಟ ನಡೆಸುವ ನಿರೀಕ್ಷೆ ಇದೆ. ಸದ್ಯ ಟಾಟಾ ಕಂಪನಿಯ ತೆಕ್ಕೆಯಲ್ಲಿ ಮೂರು ಏರ್ ಲೈನ್ಸ್ ಗಳು ಇರಲಿವೆ. ಈಗಾಗಲೇ ಟಾಟಾ ಕಂಪನಿಯು ವಿಸ್ತಾರಾ ಏರ್ ಲೈನ್ಸ್ ಹಾಗೂ ಏರ್ ಏಷ್ಯಾ ಏರ್ ಲೈನ್ಸ್ ಗಳ ಮಾಲೀಕತ್ವದ ಪಾಲುನ್ನು ಹೊಂದಿದೆ.









