ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆಚರಣೆಗೆ ಸಮ್ಮತಿ ನೀಡಿದ ಸಿಎಂ Saaksha Tv
ಬೆಂಗಳೂರು: ಮಾರ್ಚ 3 ರಿಂದ 13 ರವರೆಗೆ 10 ದಿನಗಳ ಕಾಲ ನಡೆಯಲಿರುವ ಬೆಂಗಳೂರು ಅಂತರಷ್ಟ್ರೀಯ ಚಲನಚಿತ್ರೋತ್ಸವಕ್ಕೆ ರಾಜ್ಯ ಸರಕಾರ ಅನುಮತಿ ನೀಡಿದೆ.
ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ 13 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ಸಭೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಚಲನಚಿತ್ರೋತ್ಸವಕ್ಕೆ ಸಿಎಂ ಕೊರೊನಾ ಷರತ್ತಿನೊಂದಿಗೆ ಆಚರಣೆಗೆ ಒಪ್ಪಿಗೆ ನೀಡಿದ್ದಾರೆ. ಇದೇ ಸಮಯದಲ್ಲಿ ಬೊಮ್ಮಾಯಿ ಚಲನಚಿತ್ರೋತ್ಸವದ ಲೋಗೋವನ್ನು ಬಿಡುಗಡೆ ಮಾಡಿದರು.
ಸಭೆ ಬಳಿಕ ಮಾತನಾಡಿದ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಸಿಎಂ ಅವರ ಜೊತೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸದ ಬಗ್ಗೆ ಚರ್ಚೆ ನಡೆಸಲಾಯಿತು. ಈ ಚಲನಚಿತ್ರೋತ್ಸವ ದೇಶದ ಐದನೇ ದೊಡ್ಡ ಚಲನಚಿತ್ರೋತ್ಸವವಾಗಿದೆ. ಈ ಬಾರಿ ಚಲನಚಿತ್ರೋತ್ಸವ ನಡೆಸಲು ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ. ಕೊರೊನಾ ನಿಯಮಾವಳಿ ಪಾಲಿಸಕೊಂಡು ಚಲನಚಿತ್ರೋತ್ಸವ ನಡೆಯಲಿದೆ ಎಂದು ಹೇಳಿದರು
13ನೇ ಬೆಂಗಳೂರು ಅಂತಾರಷ್ಟ್ರೀಯ ಚಲನಚಿತ್ರೋತ್ಸ ಮಾರ್ಚ 3 ರಿಂದ 13 ರವರೆಗೆ 10 ದಿನಗಳ ಕಾಲ ನಡೆಯಲಿದೆ. ಜಿಕೆವಿಕೆಯಲ್ಲಿ ಚಲನಚಿತ್ರೋತ್ಸವದ ಉದ್ಘಾಟನೆ ಇರಲಿದೆ ಎಂದು ತಿಳಸಿದರು.