ದೋಣಿ ಮಗುಚಿ ಇಬ್ಬರು ಅಪ್ರಾಪ್ತರು ನಾಪತ್ತೆ Saaksha Tv
ಮಧ್ಯಪ್ರದೇಶ: ನದಿಯಲ್ಲಿ ದೋಣಿ ಮಗುಚಿ ಹದಿಹರೆಯದ ಹುಡುಗ ಮತ್ತು ಹುಡುಗಿ ನಾಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಸಿಂಧ್ ನದಿಯಲ್ಲಿ ನಡೆದಿದೆ.
16 ವರ್ಷದ ದ್ರೌಪದಿ ಬಾಘೆಲ್ ಮತ್ತು 13 ವರ್ಷದ ಓಂ ಬಾಘೆಲ್ ನಾಪತ್ತೆಯಾದವರು ಎಂದು ತಿಳಿದು ಬಂದಿದೆ. ಸಿಂಧ್ ನದಿಯ ಮತ್ತೊಂದು ದಡದಲ್ಲಿರುವ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮಕ್ಕೆ ಒಂದೇ ದೋಣಿಯಲ್ಲಿ ಒಟ್ಟು 12 ಜನ ಪ್ರಯಾಣಿಸಿದ್ದರು. ಈ ದಾರ್ಮಿಕ ಕಾರ್ಯಕ್ರಮವನ್ನು ಮುಗಿಸಿಕೊಂಡು ವಾಪಸ್ ಬರುತ್ತಿರುವಾಗ ದೋಣಿ ಮಗುಚಿಕೊಂಡಿದೆ.
ದೋಣಿ ಮಗುಚಿದ ಕೂಡಲೇ ದೋಣಿಯಲ್ಲಿದ್ದ ಕೇಲವರು ಈಜಿ ದಡ ಸೇರಿದ್ದಾರೆ. ಇನ್ನೂ ಕೆಲವರನ್ನು ರಕ್ಷಿಸಲಾಗಿದೆ. ಆದರೆ ದ್ರೌಪದಿ ಬಾಘೆಲ್ ಮತ್ತು ಓಂ ಬಾಘೆಲ್ ಹದಿಹರೆಯರು ನಾಪತ್ತೆಯಾಗಿದ್ದಾರೆ. ದುರಂತ ನಡೆದ ಸ್ಥಳ ಭಿಂಡ್ ನಗರದಿಂದ 40 ಕಿಲೋಮೀಟರ್ ದೂರದಲ್ಲಿದೆ. ನಾಪತ್ತೆಯಾದವರಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ನಾಯಾಗಾಂವ್ ಪೊಲೀಸ್ ಠಾಣೆಯ ಅಧಿಕಾರಿ ನರೇಂದ್ರ ಸಿಂಗ್ ಕುಶ್ವಾಹಾ ಮಾಹಿತಿ ನೀಡಿದ್ದಾರೆ.