UP Assembly Election 2022: ಯೋಗಿ ನಾಡಲ್ಲಿ ಸೈಲೆಂಟ್ ಆದ್ರಾ ಜ್ಯೂ.ಇಂದಿರಾ..?
ಯೋಗಿ ನಾಡಲ್ಲಿ ಸೈಲೆಂಟ್ ಆದ್ರಾ ಜ್ಯೂನಿಯರ್ ಇಂದಿಯಾ..? ಎಂಬ ಪ್ರಶ್ನೆ ಇದೀಗ ರಾಜಕೀಯ ಪಡಸಾಲೆಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಒಂದು ಕಾಲದಲ್ಲಿ ಉತ್ತರಪ್ರದೇಶ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು. ಅಲ್ಲಿ ಕಾಂಗ್ರೆಸ್ ಬಾವುಟ ಯಾವುದೇ ಅಡ್ಡಿ ಆತಂಕಗಳಿಲ್ಲದೇ ವಿರಾಜಮಾನವಾಗಿ ರಾರಾಜಿಸುತ್ತಿತ್ತು. ಕಾಲ ಕಳೆದಂತೆ ಸಮಾಜವಾದಿ ಪಾರ್ಟಿ. ಬಿಎಸ್ ಪಿ ಯುಪಿಯಲ್ಲಿ ಗಟ್ಟಿಯಾಗಿ ನೆಲೆಯೂರಿ ಅಧಿಕಾರಕ್ಕೆ ಬಂದರೂ, ಒಂದಲ್ಲಾ ಒಂದು ರೀತಿಯಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ ಹಿಡಿತದಲ್ಲೇ ಇತ್ತು.
up-assembly-election-2022- congress priyanka gandhi vadra silent
ಆದ್ರೆ 2013ರ ಲೋಕಸಭೆ ಚುನಾವಣೆಯಲ್ಲಿ ಮೋದಿ-ಅಮಿತ್ ಶಾ ಜೋಡಿ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರ ಮಾಡಿ ಉತ್ತರಪ್ರದೇಶದಲ್ಲಿ ಕೇಸರಿ ಬಾವುಟವನ್ನು ಹಾರಿಸಿದರು. ಅದು ಯಾವ ಮಟ್ಟಿಗೆ ಅಂದರೇ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೆಲಯೇ ಇಲ್ಲದಂತೆ ಮಾಡಿದ್ದಾರೆ. ಅಂದಿನಿಂದ ಇಂದಿನ ವರೆಗೂ ಯುಪಿಯಲ್ಲಿ ಕೇಸರಿ ಬಾವುಟ ರಾರಾಜಿಸುತ್ತಲೇ ಇದೆ. ಕಟ್ಟಾ ಹಿಂದುತ್ವವಾದಿ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸುತ್ತಿದ್ದಾರೆ.
ಉತ್ತರ ಪ್ರದೇಶ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕಳೆದ ಎರಡು ವರ್ಷಗಳಿಂದೆ ಉತ್ತರ ಪ್ರದೇಶಕ್ಕೆ ಕಾಲಿಟ್ಟರು. ಯುಪಿ ರಾಜಕಾರಣದಲ್ಲಿ ಅಸ್ತಿತ್ವ ಕಂಡುಕೊಳ್ಳುವ ಜೊತೆ ಜೊತೆಗೆ ಕಾಂಗ್ರೆಸ್ ಪಕ್ಷವನ್ನು ಮತ್ತೆ ಟ್ರ್ಯಾಕ್ ತರಲು ಪ್ರಿಯಾಂಕಾ ಯೋಗಿ ನಾಡಲ್ಲಿ ನೆಲೆಯೂರಿದರು.
ಅಲ್ಲದೆ 2022ರ ಉತ್ತರ ಪ್ರದೇಶ ಚುನಾವಣೆಗಾಗಿ ಪ್ರಿಯಾಂಕಾ ಗಾಂಧಿ ಸಾಕಷ್ಟು ಸಿದ್ದತೆಗಳನ್ನು ನಡೆಸಿದ್ದರು. ಉತ್ತರಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಹೆಚ್ಚು, ಹೆಚ್ಚು ಕಾಲ ಕಳೆದು ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ್ದರು. ಆದ್ರೆ ಯುಪಿ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಕಾಂಗ್ರೆಸ್ ಮತ್ತೆ ಚಾರ್ಮ್ ಕಳೆದುಕೊಂಡಂತೆ ಅನಿಸುತ್ತಿದೆ. ಮುಖ್ಯವಾಗಿ ಯೋಗಿ ಆದಿತ್ಯನಾಥ್ ಗೆ ಠಕ್ಕರ್ ಕೊಡಲೇಬೇಕು ಎಂದು ಅಖಾಡಕ್ಕೆ ಧುಮುಖಿದ್ದ ಪ್ರಿಯಾಂಕಾ ಗಾಂಧಿ ಸಮಾಜವಾದಿ ಪಾರ್ಟಿ, ಬಿಜೆಪಿಯ ಅಬ್ಬರದಲ್ಲಿ ಕಳೆದು ಹೋದಂತೆ ಕಾಣಿಸುತ್ತಿದೆ.
ಯಾಕಂದರೇ ಪ್ರತಿ ಬಾರಿಯಂತೆ ಯುಪಿ ಚುನಾವಣೆ ರೋಚಕತೆ ಪಡೆದುಕೊಂಡಿದೆ. ಆದ್ರೆ ಈ ಬಾರಿ ಸಮಾಜವಾದಿ ಪಾರ್ಟಿ ಮತ್ತು ಬಿಜೆಪಿ ಮಧ್ಯೆ ನೇರ ಹಣಾಹಣಿ ಇರುವಂತೆ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಸದ್ಯ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ರಾಜಕೀಯ ಮೇಲಾಟಗಳು, ಪಕ್ಷಾಂತರಗಳು, ಜಾತಿ ಸಮೀಕರಣಗಳು ಎಲ್ಲವೂ ಬಿಜೆಪಿ ಮತ್ತು ಎಸ್ ಪಿ ಸುತ್ತ ಸುತ್ತುತ್ತಿವೆ.
ಆದ್ರೆ ಕಾಂಗ್ರೆಸ್ ನಲ್ಲಿ ಮಾತ್ರ ಚುನಾವಣಾ ಹುರುಪೇ ಕಾಣಿಸುತ್ತಿಲ್ಲ. ಇದಕ್ಕೆ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು..? ಎಂಬುವುದೇ ಅಲ್ಲಿನ ಕಾರ್ಯಕರ್ತರಿಗೆ ಸ್ಪಷ್ಟವಾಗಿಲ್ಲ. ಇದಲ್ಲದೇ ಕಾಂಗ್ರೆಸ್ ನಾಯಕರು ಕೂಡ ಬೇರೆ ಪಕ್ಷಗಳತ್ತ ಮುಖಮಾಡುತ್ತಿರುವುದು ಕೂಡ ಕಾರಣ ಎಂದು ಹೇಳಲಾಗುತ್ತಿದೆ.