ಹೈದರಾಬಾದ್, ಮೇ 18 : ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕುಸಿಯುತ್ತಿರುವ ಕಚ್ಚಾ ತೈಲ ಬೆಲೆ ಗಲ್ಫ್ ರಾಷ್ಟ್ರಗಳನ್ನು ಚಿಂತೆಗೀಡು ಮಾಡುತ್ತಿದೆ. ಭಾರತವು ಕಚ್ಚಾ ತೈಲ ಮತ್ತು ಎಲ್.ಪಿ.ಜಿ ಗಾಗಿ ಸೌದಿ ಅರೇಬಿಯಾವನ್ನು ಅವಲಂಬಿಸಿರುವ ರೀತಿಯಲ್ಲಿ, ಸೌದಿ ಅರೇಬಿಯಾ ಕೂಡ ತನ್ನ ಆಹಾರ ಸುರಕ್ಷತೆಗಾಗಿ ಭಾರತವನ್ನು ನೋಡುತ್ತಿದೆ ಎಂದು ಸೌದಿ ಅರೇಬಿಯಾದ ಭಾರತದ ರಾಯಭಾರಿ ಡಾ.ಆಸಫ್ ಸಯೀದ್ ಹೇಳಿದ್ದಾರೆ. ಅವರು ಐಎಎನ್‌ಎಸ್ ಗೆ ನೀಡಿರುವ ಸಂದರ್ಶನದಲ್ಲಿ ಭಾರತವು ಅಕ್ಕಿ, ಕೆಂಪು ಮಾಂಸ, ಸಕ್ಕರೆ, ಮಸಾಲೆ ಮತ್ತು ಶಿಶು ಹಾಲಿನ ಪುಡಿಯನ್ನು ಉತ್ಪಾದಿಸುವ ಅತ್ಯುತ್ತಮ ತಾಣವೆಂದು ಗುರುತಿಸಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಕೂಡ ಲಾಕ್ ಡೌನ್ ಜಾರಿಯಲ್ಲಿದ್ದು, ಇಂಧನ ಬೇಡಿಕೆ ಕುಸಿತ ಕಂಡಿದ್ದರೂ, ಸೌದಿ ಅರೇಬಿಯಾದಿಂದ ದೇಶದ ಕಚ್ಚಾ ತೈಲ ಆಮದಿನಲ್ಲಿ ಯಾವುದೇ ಕುಸಿತ ಕಂಡುಬಂದಿಲ್ಲ ಎಂದು ಅವರು ಹೇಳಿದರು. ಕೊರೋನಾ ಬಿಕ್ಕಟ್ಟಿನಿಂದಾಗಿ ಸವಾಲುಗಳು ಎದುರಾಗಿದ್ದರೂ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲು ದೊಡ್ಡ ಅವಕಾಶಗಳಿವೆ ಎಂದು ನಂಬಿರುವುದಾಗಿ ರಾಯಭಾರಿ ಡಾ.ಆಸಫ್ ಸಯೀದ್ ಹೇಳಿದ್ದಾರೆ.
‘ಸಿದ್ದರಾಮಯ್ಯ ನಿವೃತ್ತಿಯಾದರೆ ಕಾಂಗ್ರೆಸ್‌ಗೆ ಕಷ್ಟ’: ಎಚ್.ಸಿ. ಬಾಲಕೃಷ್ಣ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ರಾಜಕೀಯ ನಿವೃತ್ತಿಯ ಸುಳಿವು ನೀಡಿದ ಬೆನ್ನಲ್ಲೇ, ಕಾಂಗ್ರೆಸ್‌ನಲ್ಲಿ ಈ ಕುರಿತು ಚರ್ಚೆಗಳು ಜೋರಾಗಿವೆ. ಈ...








