IPL 2022 | ಮೆಗಾ ಹರಾಜಿನಲ್ಲಿ ಈ ಇಬ್ಬರಿಗೆ ಜಾಕ್ ಪಾಟ್
15ನೇ ಆವೃತ್ತಿಯ ಐಪಿಎಲ್ ಮೆಗಾ ಹರಾಜಿಗೆ ದಿನಗಣನೆ ಶುರುವಾಗಿದ್ದು, ಯಾರು ತಂಡ ಯಾರಿಗೆ ಮಣೆ ಹಾಕುತ್ತೆ, ಯಾವ ಸ್ಟಾರ್ ಆಟಗಾರ ಯಾವ ತಂಡದ ಪಾಲಾಗುತ್ತಾನೆ, ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಮಿಲಿಯನ್ ಡಾಲರ್ ಬೇಬೆ ಯಾರಾಗುತ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡಿದೆ. IPL 2022 mega auction shahrukh khan ishan kishan saaksha tv
ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ಮೆಗಾ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ ಟೀಂ ಇಂಡಿಯಾದ ಯುವ ಬ್ಯಾಟರ್ ಕಮ್ ವಿಕೆಟ್ ಕೀಪರ್ ಇಶಾನ್ ಕಿಶಾನ್ ಮತ್ತು ತಮಿಳುನಾಡಿದ ಪವರ್ ಹಿಟ್ಟರ್ ಶಾರೂಖ್ ಖಾನ್ ದುಬಾರಿ ಬೆಲೆಗೆ ಸೇಲ್ ಆಗಲಿದ್ದಾರೆ ಎಂದು ಹರ್ಷಾ ಬೋಗ್ಲೆ ಅಭಿಪ್ರಾಯಪಟ್ಟಿದ್ದಾರೆ.
ಈ ಇಬ್ಬರು ಆಟಗಾರರು ಮೆಗಾ ಹರಾಜಿನಲ್ಲಿ ಹೊಸ ದಾಖಲೆಯನ್ನು ನಿರ್ಮಿಸಲಿದ್ದಾರೆ ಎಂದು ಹರ್ಷ ಬೊಗ್ಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಕೆಟ್ ಕೀಪರ್ ಕಮ್ ಎಡಗೈ ಬ್ಯಾಟ್ಸ್ ಮನ್ ಆಗಿರುವುದು ಇಶಾನ್ ಕಿಶನ್ ಅವರ ಪ್ಲಸ್ ಪಾಯಿಂಟ್ ಆಗಿದೆ. ಇತ್ತ ಕೆಳ ಕ್ರಮಾಂಕದಲ್ಲಿ ಪವರ್ ಹಿಟ್ಟಿಂಗ್ ಮಾಡಬಲ್ಲ ಆಟಗಾರನಾಗಿರುವು ಶಾರೂಖ್ ಖಾನ್ ಪ್ಲಸ್ ಪಾಯಿಂಟ್ ಆಗಿದೆ. ಹೀಗಾಗಿ ಈ ಇಬ್ಬರಿಗಾಗಿ 10 ಫ್ರಾಂಚೈಸಿಗಳು ಮುಗಿಬೀಳಲಿವೆ ಎಂದು ಹರ್ಷ ಪ್ರತಿಪಾದಿಸಿದ್ದಾರೆ.
ಈ ಸಂದರ್ಭದಲ್ಲಿ ಶಾರುಖ್ ಖಾನ್ ಅವರನ್ನು ಟೀಂ ಇಂಡಿಯಾದ ಮಾಜಿ ಹಿಟ್ಟರ್ ಯೂಸುಫ್ ಪಠಾಣ್ ಅವರಿಗೆ ಹರ್ಷ ಹೋಲಿಕೆ ಮಾಡಿದ್ದಾರೆ. ಶಾರುಖ್ ಖಾನ್, ಯೂಸುಫ್ ಪಠಾಣ್ ಅವರಂತೆ ಬಿಗ್ ಸಿಕ್ಸರ್ ಗಳನ್ನು ಸಿಡಿಸಿ ಒಂದೇ ಕೈಯಿಂದ ಪಂದ್ಯದ ರೂಪವನ್ನೇ ಬದಲಿಸಬಲ್ಲ ಆಟಗಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೆಗಾ ಹರಾಜಿನಲ್ಲಿ ಶಾರುಖ್ ಖಾನ್ 10 ರಿಂದ 13 ಕೋಟಿ ಮತ್ತು ಇಶಾನ್ ಕಿಶನ್ 10 ರಿಂದ 17 ಕೋಟಿ ರೂ. ಪಡೆಯಲಿದ್ದಾರೆ ಎಂದಿದ್ದಾರೆ ಹರ್ಷ ಬೊಗ್ಲೆ