UP Election – 100 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಓವೈಸಿ ಪಕ್ಷ….
ಉತ್ತರ ಪ್ರದೇಶ ರಾಜ್ಯದ 403 ಸ್ಥಾನಗಳ ಪೈಕಿ 100 ಸ್ಥಾನಗಳಲ್ಲಿ ಭಗೀದಾರಿ ಸಂಕಲ್ಪ ಮೋರ್ಚಾ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. UP Election 2022: Owaisi said – Sankalp Morcha will field candidates on 100 seats in UP
ತಮ್ಮ ಪಕ್ಷ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಓವೈಸಿ ಹೇಳಿದ್ದಾರೆ. ಭಗೀದಾರಿ ಮೋರ್ಚಾ ಸಂಪೂರ್ಣ ಸಾಮರ್ಥ್ಯದಿಂದ ಚುನಾವಣೆ ಎದುರಿಸಲಿದೆ ಎಂದು ತಿಳಿಸಿದ್ದಾರೆ.
ಮೋರ್ಚಾದ ಎಲ್ಲಾ ಪಕ್ಷಗಳು ಬಾಬು ಸಿಂಗ್ ಕುಶ್ವಾಹ ನಮ್ಮ ಸಂಚಾಲಕರಾಗಲು ನಿರ್ಧರಿಸಿವೆ ಎಂದು ಓವೈಸಿ ಹೇಳಿದರು. ಗೆದ್ದರೆ ಎರಡೂವರೆ ವರ್ಷ ಅವರೇ ನಮ್ಮ ಮುಖ್ಯಮಂತ್ರಿ. ಉಳಿದ ಎರಡೂವರೆ ವರ್ಷ ದಲಿತರನ್ನು ಮುಖ್ಯಮಂತ್ರಿ ಮಾಡಲಾಗುವುದು.
ನಮ್ಮ ಸರ್ಕಾರ ರಚನೆಯಾದಾಗ ಮೂವರು ಉಪಮುಖ್ಯಮಂತ್ರಿಗಳು ಮುಸ್ಲಿಮರಾದರೆ ಇಬ್ಬರು ಉಪಮುಖ್ಯಮಂತ್ರಿಗಳು ಹಿಂದುಳಿದ ಜಾತಿಗೆ ಸೇರಿದವರು ಎಂದು ಓವೈಸಿ ಎನ್ ಎ ಸುದ್ದಿ ಮಾಧ್ಯಮಕ್ಕೆ ಹೇಳಿದ್ದಾರೆ..