
ಕೋಲಾರ-
ಕೊರೋನಾ ಹಾವಳಿ ಹಿನ್ನೆಲೆ, ಆಹಾರ ಕಿಟ್ ಹಂಚಿಕೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.
ಕೋಲಾರದ ಮುಳಬಾಗಿಲಿನ ಜೆಡಿಎಸ್ ಪಕ್ಷದ ಎರಡು ಗುಂಪುಗಳ ಮಾತಿನ ಚಕಮಕಿ ನಡೆದಿದ್ದು, ನಂತರ ಬೀದಿಗೆ ಬಂದು ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದಾರೆ. ಇನ್ನೂ ಮಾರಾಮರಿಯಲ್ಲಿ ನರಸಭೆ ಸದಸ್ಯ ನಾಗರಾಜ್ ಗೆ ಮಚ್ಚಿನಿಂದ ಹಲ್ಲೆಯಾಗಿ ಗಂಭೀರ ಗಾಯಗಳಾಗಿದ್ದು, ಹೆಚ್ಚನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡ ಮುಳಬಾಗಿಲು ಪೊಲೀಸರು, ಜೆಡಿಎಸ್ ನ ಮತ್ತೊಂದು ಬಣದ ಗಂಗಾಧರ್, ಚಂದ್ರು, ನಾಗರಾಜ್ ಸೇರಿ ಐದು ಜನರ ವಿಚಾರಣೆ ನಡೆಸುತ್ತಿದ್ದಾರೆ.








