ಭೋಪಾಲ್ : ಜಗ್ಗಿ ವಾಸುದೇವ್ ತನ್ನನ್ನು ತಾನು ಸದ್ಗುರು ಎಂದು ಹೇಳಿಕೊಳ್ಳಬಹುದು ಆದ್ರೆ ಆತನೊಬ್ಬ ವಂಚಕ ಎಂದು ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ರಾಜೇಂದ್ರ ಸಿಂಗ್ ಅವರು ಹೇಳಿಕೆ ನೀಡಿದ್ದಾರೆ. ಭೋಪಾಲ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ವಾಸುದೇವ್ ನಡೆಸುವ ಕಾರ್ಯಕ್ರಮ, ಯೋಜನೆಗಳಿಗೆ ಸರ್ಕಾರದಿಂದ ಎಷ್ಟು ಅನುದಾನ ಸಿಕ್ಕಿದೆ, ಅದರಲ್ಲಿ ಎಷ್ಟು ಖರ್ಚಾಗಿದೆ ಎಂಬುದರ ಬಗ್ಗೆ ತನಿಖೆಯಾಗಬೇಕು. ”ಮಿಸ್ಡ್ ಕಾಲ್ ನೀಡಿ ನದಿ ಜೋಡಣೆಯಾಗಲಿದೆ ಎಂಬುದು ಹಸಿ ಸುಳ್ಳು, ಇದು ಎಂದಾದರೂ ಸಾಧ್ಯವೇ, ನದಿಗಳ ಜೋಡಣೆಯಾಗಿದೆಯೇ” ಎಂದು ಪ್ರಶ್ನಿಸಿದ್ದಾರೆ.
ಇನ್ನು ಪತ್ನಿಯನ್ನು ಕೊಂದಿರುವ ಜಗ್ಗಿ ವಾಸುದೇವ್, ವಿನೋಬಾ ಭಾವೆ ಅವರ ಭೂದಾನ ಯೋಜನಡೆಯಡಿಯಲ್ಲಿ ಕೊಯಮತ್ತೂರಿನ ರೈತರ ಭೂಮಿಯನ್ನು ಕಬಳಿಸಿದ್ದಾನೆ ಎಂದು ರಾಜೇಂದ್ರ ಸಿಂಗ್ ಅವರು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಈಶಾ ಫೌಂಡೇಷನ್ ವಕ್ತಾರರು, ರಾಜೇಂದ್ರ ಸಿಂಗ್ ಅವರ ಆರೋಪ, ವೈಯಕ್ತಿಕ ದಾಳಿಯಿಂದ ಆಘಾತವಾಗಿದೆ. ಆರೋಪಗಳು ಸತ್ಯಕ್ಕೆ ದೂರವಾಗಿದ್ದು ಎಂದಿದ್ದಾರೆ.








