H.Vishwanath | ಸಿದ್ದರಾಮಯ್ಯ ನೀವೊಬ್ಬರೆ ಗಂಡಸಾ..? : H.ವಿಶ್ವನಾಥ್
ಮೈಸೂರು : ಸಿದ್ದರಾಮಯ್ಯ ನೀವೊಬ್ಬರೆ ಗಂಡಸಾ..? ನಿಮಗೆ ಸ್ಪರ್ಧಿಸಲು ಕ್ಷೇತ್ರವೇ ಇಲ್ಲ. ನೀವು ಹೋಗಬೇಕು ಅಂದುಕೊಳ್ತಿರೋ ಕ್ಷೇತ್ರದಲ್ಲಿ ಗಂಡಸರು ಯಾರು ಇಲ್ಲವಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ವಾಗ್ದಾಳಿ ಮುಂದುವರೆಸಿದ್ದಾರೆ . H Vishwanath barrage against Siddaramaiah
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ವಿಶ್ವನಾಥ್, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ನೀವೊಬ್ಬರೆ ಗಂಡಸಾ..?
ನಿಮಗೆ ಸ್ಪರ್ಧಿಸಲು ಕ್ಷೇತ್ರವೇ ಇಲ್ಲ. ನೀವು ಹೋಗಬೇಕು ಅಂದುಕೊಳ್ತಿರೋ ಕ್ಷೇತ್ರದಲ್ಲಿ ಗಂಡಸರು ಯಾರು ಇಲ್ಲವಾ..? ನಿಮ್ಮ ಯಾರು ಕರೆಯುತ್ತಾರೆ..?
ಯಾರೋ ಕೆಲವು ನಿಮ್ಮ ಚಮಚಾಗಳು ಸ್ಪರ್ಧಿಸಲು ಕರೆಯುತ್ತಿದ್ದಾರೆ . ಕೊಬ್ಬರಿ ಮಿಠಾಯಿ ಕೊಟ್ಟು ಕರೆಯುತ್ತಿದ್ದಾರಾ..?
ಸಿದ್ದರಾಮಯ್ಯ ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಗೆದ್ದು ತೋರಿಸಿ ಎಂದು ಸವಾಲು ಹಾಕಿದರು.
ಇನ್ನು ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿನ ಭಸ್ಮಾಸುರ ಎಂದ ವಿಶ್ವನಾಥ್, ಕಾಂಗ್ರೆಸ್ ಮುಗಿಸಿಯೇ ಅವರು ಹೋಗುವುದು ಎಂದು ಕಿಡಿಕಾರಿದರು.
ನನ್ನ ಸಂಪರ್ಕದಲ್ಲಿ ಬಿಜೆಪಿ ಶಾಸಕರಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ಕೊಟ್ಟ ವಿಶ್ವನಾಥ್, ಮಿಸ್ಟರ್ ಸಿದ್ದರಾಮಯ್ಯ, 15ಜನರಿಗೆ ಎಷ್ಟು ಕೋಟಿ ಕೊಟ್ಟು ಖರೀದಿ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು.









