ಡಿಕೆಶಿಯನ್ನ ಭೇಟಿಯಾಗಿದ್ಯಾಕೆ ಆನಂದ್ ಸಿಂಗ್.. ಓದಿ ದಿನದ TOP 5 ಸುದ್ದಿ Today top news in kannada saaksha tv
01. ಭಾರತದಲ್ಲಿ ಕೊರೊನ ಸೋಂಕಿನ ಮೂರನೇ ಅಲೆಯ ಏರಿಳಿತ ಮುಂದುವರೆದಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,09,918 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ 959 ಮಂದಿ ಕಿಲ್ಲರ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇಂದಿನ ಪ್ರಕರಣಗೊಂದಿಗೆ ದೇಶದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 18,31,268 ಬಂದು ನಿಂತಿದೆ.
02. ಬಿಜೆಪಿ ಶಾಸಕರು, ಸಚಿವರು ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ ಅನ್ನುವ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ. ಇದೀಗ ಈ ಸುದ್ದಿಗೆ ಪುಷ್ಟಿ ನೀಡುವ ಘಟನೆವೊಂದು ನಡೆದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ಪ್ರವಾಸೋಧ್ಯಮ ಸಚಿವ ಆನಂದ್ ಸಿಂಗ್ ಬೇಟಿ ನೀಡಿದ್ದಾರೆ. ಇದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸೋಮವಾರ ಬೆಳಗ್ಗೆ ಸದಾಶಿವ ನಗರದ ಡಿಕೆಶಿ ನಿವಾಸಕ್ಕೆ ಆನಂದ್ ಸಿಂಗ್ ಖಾಸಗಿ ಕಾರಿನಲ್ಲಿ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.
03. ಸಿದ್ದರಾಮಯ್ಯ ನೀವೊಬ್ಬರೆ ಗಂಡಸಾ..? ನಿಮಗೆ ಸ್ಪರ್ಧಿಸಲು ಕ್ಷೇತ್ರವೇ ಇಲ್ಲ. ನೀವು ಹೋಗಬೇಕು ಅಂದುಕೊಳ್ತಿರೋ ಕ್ಷೇತ್ರದಲ್ಲಿ ಗಂಡಸರು ಯಾರು ಇಲ್ಲವಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ವಾಗ್ದಾಳಿ ಮುಂದುವರೆಸಿದ್ದಾರೆ . ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ವಿಶ್ವನಾಥ್, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
04. ಫೆಬ್ರವರಿ 6 ರಂದು ಮೊಟೆರಾ ಮೈದಾನದಲ್ಲಿ ವಿಂಡೀಸ್ ವಿರುದ್ಧದ ನಡೆಯುವ ಮೊದಲ ಏಕದಿನ ಪಂದ್ಯದೊಂದಿಗೆ ಏಕದಿನ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಇತಿಹಾಸ ನಿರ್ಮಿಸಲಿದೆ. ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ತಂಡಕ್ಕೆ ಸಾಧ್ಯವಾಗದ 1000ನೇ ಏಕದಿನ ಮೈಲುಗಲ್ಲು ಈ ಪಂದ್ಯದ ಮೂಲಕ ಭಾರತ ತಲುಪಲಿದೆ. ಇದುವರೆಗೆ 999 ಏಕದಿನ ಪಂದ್ಯಗಳನ್ನಾಡಿರುವ ಭಾರತ, ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಹೊಸ ಅಧ್ಯಾಯ ಬರೆಯಲಿದೆ.
05. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ವಿರುದ್ಧ ಸೆಣಸಾಡಲು ನಾವು ಎದುರು ನೋಡುತ್ತಿದ್ದೀವಿ ಎಂದು ವಿಂಡೀಸ್ ತಂಡದ ನಾಯಕ ಪೋಲಾರ್ಡ್ ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧ ನಮಗೆ ಅದ್ಭುತ ಜಯ ಸಿಕ್ಕಿದೆ. ಈಗ ನಾವು ಭಾರತ ಪ್ರವಾಸದ ಮೇಲೆ ದೃಷ್ಠಿ ನೆಟ್ಟಿದ್ದೇವೆ. ನಾವು ಈ ಪ್ರವಾಸದಲ್ಲಿ ಟೀಂ ಇಂಡಿಯಾವನ್ನು ಖಂಡಿತವಾಗಿಯೂ ಸೋಲಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಭಾರತದ ಪ್ರವಾಸದ ಭಾಗವಾಗಿ ವೆಸ್ಟ್ ಇಂಡೀಸ್ ತಂಡ, ಮೂರು ಏಕದಿನ, ಮೂರು ಟಿ 20 ಪಂದ್ಯಗಳನ್ನಾಡಲಿದೆ.









