Union Budget | 40 ವರ್ಷದಿಂದ ಇಂತಹ ಪೇಶೆಂಟ್ ಬಜೆಟ್ ನೋಡಿಲ್ಲ
ಬೆಂಗಳೂರು : 40 ವರ್ಷದಿಂದ ಇಂತಹ ಪೇಶೆಂಟ್ ಬಜೆಟ್ ನೋಡಿಲ್ಲ. ಸಿಮೆಂಟ್, ಕಬ್ಬಿಣದ ಬೆಲೆ ಕಡಿಮೆಯಾಗಿಲ್ಲ. ಮನೆಯನ್ನ ಎಲ್ಲಿ ಕಟ್ಟಿಕೊಳ್ಳೋದು..? ಇದು ಕೇಂದ್ರದ ಬಜೆಟ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೊಟ್ಟಿರುವ ಪ್ರತಿಕ್ರಿಯೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಇಂದು ಕೇಂದ್ರ ಬಜೆಟ್ ಮಂಡಿಸಿದರು.
Budget 2022 – ಕೃಷಿ ಕ್ಷೇತ್ರಕ್ಕೆ ಸಿಕ್ಕಿದ್ದೇನು ? ಬಜೆಟ್ ಭಾಷಣದಲ್ಲಿ 12 ಬಾರಿ ‘ರೈತ’ ಪದ ಪ್ರಸ್ತಾಪ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಮೊದಲಿಗೆ ಸುರಿಮಳೆಯ ಬಜೆಟ್ ಕೊಡಿಸಿದ್ದಕ್ಕೆ ನಮ್ಮ ರಾಜ್ಯದ 25 ಜನ ಎಂಪಿಗಳಿಗೆ ಹಾಗೂ ಸಿಎಂ ಬೊಮ್ಮಾಯಿ ಅವರನ್ನು ಅಭಿನಂದಿಸುತ್ತೇನೆ ಎಂದು ವ್ಯಂಗ್ಯವಾಡಿದರು.
ಕೊರೊನಾ ಸಮಯದಲ್ಲಿ ತುಂಬಾ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ರೈತರಿಗೆ ಬೆಂಬಲ ಬೆಲೆ ಇಲ್ಲ. ವೇತನದವರಿಗೆ ರಿಲೀಫ್ ಇಲ್ಲ. ನಾನು 40 ವರ್ಷದಿಂದ ಇಂತಹ ಪೇಶೆಂಟ್ ಬಜೆಟ್ ನೋಡಿಲ್ಲ ಎಂದು ಕಿಡಿಕಾರಿದರು.
ಇನ್ನು ಬಜೆಟ್ ನಲ್ಲಿ ಸಿಮೆಂಟ್, ಕಬ್ಬಿಣದ ಬೆಲೆ ಕಡಿಮೆಯಾಗಿಲ್ಲ. ಮನೆಯನ್ನ ಎಲ್ಲಿ ಕಟ್ಟಿಕೊಳ್ಳೋದು..? ಎಂದು ಪ್ರಶ್ನಿಸಿದ ಡಿ.ಕೆ.ಶಿವಕುಮಾರ್, ಈ ಬಜೆಟ್ ಎಲ್ಲರ ಜೇಬನ್ನ ಪಿಕ್ ಪಾಕೆಟ್ ಮಾಡಿದೆ ಎಂದು ಟೀಕಿಸಿದ್ದಾರೆ.









