Sports | ಕ್ರೀಡಾ ಜಗತ್ತಿನ ಇಂದಿನ ಟಾಪ್ 5 ಸುದ್ದಿಗಳು
01. ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿ, ಬಿಸಿಸಿಐ ಮೇಲೆ ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಟೀಕೆಗಳ ಸುರಿಮಳೆಗೈದಿದ್ದಾರೆ. 2011ರ ಏಕದಿನ ವಿಶ್ವಕಪ್ ಗೆದ್ದ ಬಳಿಕ ಧೋನಿ ಹಿರಿಯರನ್ನು ಪರಿಗಣಿಸದೇ ನಿರ್ದಾಕ್ಷಿಣ್ಯವಾಗಿ ನಡೆದುಕೊಂಡಿದ್ದಾರೆ. ಸರಿಯಾದ ವಿವರಣೆ ನೀಡದೇ ತಂಡದಿಂದ ಹೊರಹಾಕಿದ್ರು ಎಂದು ಆರೋಪಿಸಿದ್ದಾರೆ.
02. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಯಾರು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಂತಾಗಿದೆ. ಅಂತೂ ಇಂತೂ ಆರ್ ಸಿ ಬಿ ಫ್ರಾಂಚೈಸಿ ಕನ್ನಡಿಗ ಮನೀಷ್ ಪಾಂಡೆಗೆ ಕ್ಯಾಪ್ಟನ್ಸಿ ಜವಾಬ್ದಾರಿ ನೀಡಲು ಮುಂದಾಗಿದೆ ಎಂದು ಆರ್ ಸಿಬಿಯ ಮೂಲಗಳಿಂದಲೇ ತಿಳಿದು ಬಂದಿದೆ. ಹೀಗಾಗಿ ಮೆಗಾ ಹಜಾರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ನೂರಕ್ಕೆ ನೂರರಷ್ಟು ಮನೀಷ್ ಪಾಂಡ್ಯೆಗೆ ಮಣೆ ಹಾಕಲಿದೆ.
03. ಟೀಂ ಇಂಡಿಯಾ ಬೌಲರ್ ಗಳನ್ನು ಉದ್ದೇಶಿಸಿ ಪಾಕಿಸ್ತಾನ್ ವೇಗದ ಬೌಲರ್ ಶೋಯೆಬ್ ಅಖ್ತರ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಪಾಕಿಸ್ತಾನಿ ಬೌಲರ್ ಗಳು ಹೆಚ್ಚಾಗಿ ಮಾಂಸ ಆಹಾರ ಸೇವಿಸುತ್ತೇವೆ. ಹೀಗಾಗಿಯೇ ನಾವು ಹೆಚ್ಚು ಸಿಂಹಗಳಂತೆ ಮೈದಾನದಲ್ಲಿ ಓಡುತ್ತೇವೆ. ಆದ್ರೆ ಟೀಂ ಇಂಡಿಯಾದ ಬೌಲರ್ ಗಳು ತಮ್ಮ ಆಹಾರ ಪದ್ದತಿಯಿಂದಾಗಿ ಬಲಹೀನರಾಗಿ ಕಾಣಿಸುತ್ತಾರೆ ಎಂದು ವಿವಾದಕ್ಕೆ ನಾಂದಿಯಾಡಿದ್ದಾರೆ.
04. ತಂಡಕ್ಕಾಗಿ ಕೆಲಸ ಮಾಡಲು ಕ್ಯಾಪ್ಟನ್ಸಿ ಪಟ್ಟ ಬೇಕಾಗಿಲ್ಲ ಎಂದು ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಕ್ಯಾಪ್ಟನ್ ಅಲ್ಲದಿದ್ದರೂ ಒಬ್ಬ ಬ್ಯಾಟರ್ ಆಗಿ ಸಿನಿಯರ್ ಪ್ಲೇಯರ್ ಆಗಿ ತಂಡದಲ್ಲಿ ಪ್ರಮುಖ ಪಾತ್ರ ಪೋಷಿಸುವೆ ಎಂದು ವಿರಾಟ್ ತಿಳಿಸಿದ್ದಾರೆ. ಇನ್ಮುಂದೆ ಬ್ಯಾಟರ್ ಆಗಿ ತಾವು ಮತ್ತಷ್ಟು ಅದ್ಭುತ ಪ್ರದರ್ಶನಗಳೊಂದಿಗೆ ಟೀಂ ಇಂಡಿಯಾಗೆ ಗೆಲುವುಗಳನ್ನು ತಂದುಕೊಡುತ್ತೇನೆ ಎಂದು ವಿರಾಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
05. ಟೀಂ ಇಂಡಿಯಾದನ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್, ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅಪರೂಪದ ಮೈಲುಗಲ್ಲು ಮುಟ್ಟಲು ಇನ್ನೊಂದು ಹೆಜ್ಜೆ ದೂರದಲ್ಲಿದ್ದಾರೆ. ವಿಂಡೀಸ್ ವಿರುದ್ಧ ಪ್ರಾರಂಭವಾಗಲಿರುವ ಏಕದಿನ ಸಿರೀಸ್ ನಲ್ಲಿ ಇನ್ನೊಂದು ವಿಕೆಟ್ ಪಡೆದರೇ, ಈ ಫಾರ್ಮೆಟ್ ನಲ್ಲಿ 100 ವಿಕೆಟ್ ಪಡೆದ ಭಾರತದ 23ನೇ ಬೌಲರ್ ಎಂಬ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ.









