IPLನ ಹರಾಜನಲ್ಲಿ ಕ್ರೀಡಾ ಸಚಿವ Saaksha Tv
ಬೆಂಗಳೂರು: IPLನ 15ನೇ ಆವೃತ್ತಿಗೆ ಭಾರತೀಯ ಕ್ರಿಕೆಟ್ ಮಂಡಳಿಯಿಂದ ಬಿಡುಗಡೆಯಾದ ಆಟಗಾರರ ಫೈನಲ್ ಲಿಸ್ಟ್ ನಲ್ಲಿ ಪಶ್ಚಿಮ ಬಂಗಾಳದ ಸಚಿವರ ಹೆಸರು ಪ್ರಕಟವಾಗಿದೆ.
IPLನ 15ನೇ ಆವೃತ್ತಿಯಲ್ಲಿ ಆಡುತ್ತಿರುವ 590ರ ಆಟಗಾರರ ಫೈನಲ್ ಲಿಸ್ಟ್ ನ್ನು ಭಾರತೀಯ ಕ್ರಿಕೆಟ್ ಮಂಡಳಿ ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಅಚ್ಚರಿಯ ರೀತಿಯಲ್ಲಿ ಪಶ್ಚಿಮ ಬಂಗಾಳದ ಕ್ರೀಡಾ ಸಚಿವರ ಹೆಸರು ಕಾಣಿಸಿಕೊಂಡಿದೆ. 2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ವೇಳೆ ಟಿಎಂಸಿ ಸೇರಿ ಜಯಭೇರಿ ಬಾರಿಸಿರುವ ಕ್ರಿಕೆಟರ್ ಮನೋಜ್ ತಿವಾರಿ ಹೆಸರು ಕಾಣಿಸಿಕೊಂಡಿದೆ.
2022ರ ಐಪಿಎಲ್ ಹರಾಜಿಗೋಸ್ಕರ ಒಟ್ಟು 1200ಕ್ಕೂ ಅಧಿಕ ಪ್ಲೇಯರ್ಸ್ ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದರು. ಆದರೆ, ಬಿಸಿಸಿಐ 590 ಪ್ಲೇಯರ್ಸ್ ಹೆಸರು ಫೈನಲ್ ಮಾಡಿದ್ದು, ಈಗಾಗಲೇ ಕ್ರೀಡಾ ಸಚಿವರಾಗಿ ಕೆಲಸ ಮಾಡುತ್ತಿದ್ದ ಮನೋಜ ತಿವಾರಿ ಇದೀಗ ಐಪಿಎಲ್ ಹರಾಜಿನಲ್ಲೂ ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.
Sports | ಕ್ರೀಡಾ ಜಗತ್ತಿನ ಇಂದಿನ ಟಾಪ್ 5 ಸುದ್ದಿಗಳು
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮನೋಜ್ ತಿವಾರಿ ಡೆಲ್ಲಿ ಡೇರ್ ಡೆವಿಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಪುಣೆ ಸೂಪರ್ಜೈಂಟ್ಸ್, ಪಂಜಾಬ್ ಕಿಂಗ್ಸ್ ಪರವಾಗಿ 98 ಪಂದ್ಯಗಳನ್ನಾಡಿದ್ದಾರೆ. 7 ಅರ್ಧಶತಕ ಸೇರಿದಂತೆ 1,695ರನ್ಗಳಿಕೆ ಮಾಡಿದ್ದು, ಒಂದು ವಿಕೆಟ್ ಸಹ ಪಡೆದುಕೊಂಡಿದ್ದಾರೆ. 2018ರ ಐಪಿಎಲ್ನಲ್ಲಿ ಕೊನೆಯದಾಗಿ ಪಂಜಾಬ್ ಪರ ಕಣಕ್ಕಿಳಿದಿದ್ದರು.
ಇವರು ಟೀಂ ಇಂಡಿಯಾ ಪರ 12 ಏಕದಿನ, ಮೂರು ಟಿ20 ಪಂದ್ಯಗಳನ್ನಾಡಿರುವ ತಿವಾರಿ, 125 ಪ್ರಥಮ ದರ್ಜೆ ಹಾಗೂ 163 ಲಿಸ್ಟ್ A ಪಂದ್ಯಗಳನ್ನಾಡುವ ಮೂಲಕ 14000 ರನ್ಗಳಿಕೆ ಮಾಡಿದ್ದಾರೆ.









