ಪೊಲೀಸ್ ಜೀಪ್ ಕದ್ದ ಖತರ್ನಾಕ್ ಕಳ್ಳ Saaksha Tv
ಧಾರವಾಡ: ಕಳ್ಳನೊಬ್ಬ ಪೊಲೀಸ್ ವಾಹನವನ್ನೇ ಕದ್ದಿರುವ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಆರೋಪಿ ನಾಗಪ್ಪ ಹಡಪದ ಎಂದು ತಿಳಿದು ಬಂದಿದೆ. ಈತ ಅಣ್ಣಿಗೇರಿ ಪೊಲೀಸ್ ಠಾಣೆ ಆವರಣದಲ್ಲಿ ನಿಂತಿದ್ದ ಬೋಲೆರೋ ವಾಹನವನ್ನು ಬೆಳಗಿನ ಜಾವ 4 ಗಂಟೆಗೆ ಕದ್ದಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಅಣ್ಣಿಗೇರಿ ಪಿ.ಎಸ್.ಐ. ಎಲ್.ಕೆ.ಜೂಲಕಟ್ಟಿ ಕಾರ್ಯಾಚರಣೆಗೆ ಇಳದಿದ್ದರು. ಆರೋಪಿ ಹಾವೇರಿಯ ಬ್ಯಾಡಗಿ ಬಳಿ ಇರುವುದು ಗೊತ್ತಾಯಿತು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯ ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ಜೀಪ್ ಕಳ್ಳತನ ಮಾಡಬೇಕು ಎನ್ನುವ ಆಸೆ ಇತ್ತಂತೆ. ಹೀಗಾಗಿ ಆತ ಇದಕ್ಕೆ ಅಂತಾನೆ ಸಾಕಷ್ಟು ಹೊಂಚು ಹಾಕಿದ್ದ. ಆಗಾಗ ಠಾಣೆಗೆ ಬರುತ್ತಿದ್ದ ನಾಗಪ್ಪ, ಠಾಣೆಯಲ್ಲಿ ಪಿಎಸ್ಐ ಇಲ್ಲ ಎನ್ನುವುದನ್ನ ಖಾತ್ರಿ ಪಡಿಸಿಕೊಂಡಿದ್ದಾನೆ. ಬೆಳಗಿನಜಾವ 4 ಗಂಟೆಗೆ ಪೊಲೀಸ್ ರು ನಿದ್ದೆಯ ಮಂಪರಿನಲ್ಲಿದ್ದಾಗ ಠಾಣೆ ಆವರಣಕ್ಕೆ ಬಂದು ಪೊಲೀಸ್ ಜೀಪ್ ಕದ್ದಿದ್ದೇನೆ ಎಂದು ವಿಚಾರಣೆಯಲ್ಲಿ ಬಾಯಿ ಬಿಟ್ಟಿದ್ದಾನೆ.








