ಹಿರಿಯ ನಟ ಅಶೋಕ್ ರಾವ್ ವಿಧಿವಶ…
ಬೆಂಗಳೂರು : ಸ್ಯಾಂಡಲ್ ವುಡ್ ನ ಹಿರಿಯ ನಟ ಅಶೋಕ್ ರಾವ್ ಅವರು ವಿಧಿವಶರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ಅವರು ತಡರಾತ್ರಿ ಕೊನೆಯುಸಿರೆಳೆದಿದ್ದಾರೆ..
ಕಳೆದ 15 ದಿನಗಳಿಂದ ಅಶೋಕ್ ರಾವ್ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಪ್ರತಿ ದಿನ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಕೂಡ ಚಿಕಿತ್ಸೆ ಪಡೆದ ನಂತರವೂ ಚೆನ್ನಾಗಿದ್ದರು. ಆದ್ರೆ ಮಧ್ಯರಾತ್ರಿ 12.30ಕ್ಕೆ ವಿದ್ಯಾರಣ್ಯಪುರದಲ್ಲಿರೋ ಮನೆಯಲ್ಲಿ ಕೊನೆಯುಸಿರೆಳೆದರು.
ಮಾರ್ಚ್ 4 ತೆರೆಗೆ ಬರಲಿದೆ ಅಮಿತಾಬ್ ನಟನೆಯ ಝಂಡ್….
ಅಮಿತಾಬ್ ಬಚ್ಚನ್ ಅಭಿನಯದ ಬಹು ನಿರೀಕ್ಷಿತ ಚಿತ್ರದ ಬಿಡುಗಡೆ ದಿನಾಂಕವನ್ನು ಕೊನೆಗೂ ಪ್ರಕಟಿಸಲಾಗಿದೆ. ಮಾರ್ಚ್ 4 ರಂದು ‘ಝುಂಡ್’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕೋವಿಡ್-19 ಕಾರಣದಿಂದಾಗಿ ಹಲವು ಬಾರಿ ನಿರ್ಮಾಪಕರು ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಬೇಕಾಯಿತು. ಆದರೆ ಇದೀಗ ಅಭಿಮಾನಿಗಳ ಕಾಯುವಿಕೆ ಕೊನೆಗೊಂಡಿದೆ.
ಚಿತ್ರದ ಹೊಸ ಪೋಸ್ಟರ್ ಅನ್ನು ಹಂಚಿಕೊಂಡ ಅಮಿತಾಬ್ ಈ ಗುಂಪಿನೊಂದಿಗೆ ಸ್ಪರ್ಧಿಸಲು ಸಿದ್ಧರಾಗಿರಿ, ನಮ್ಮ ತಂಡವು ಬರುತ್ತಿದೆ… ‘ಝುಂಡ್’ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. ಎಂದು ಟ್ವೀಟ್ ಮಾಡಿದ್ದಾರೆ. ಮರಾಠಿ ಬ್ಲಾಕ್ಬಸ್ಟರ್ ಚಿತ್ರ “ಸೈರಾಟ್” ಮತ್ತು “ಫ್ಯಾಂಡ್ರಿ” ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ನಾಗರಾಜ್ ಪೋಪತ್ರರಾವ್ ಮಂಜುಳೆ ಅವರು ಹಿಂದಿಯಲ್ಲಿ ಪ್ರಥಮ ಭಾರಿ ನಿರ್ದೇಶನ ಮಾಡುತ್ತಿದ್ದಾರೆ.
ಬಾಗ್ಲು ತೆಗಿ ಮೇರಿ ಜಾನ್ – ತೋತಾಪುರಿ ಹಾಡು ಬಂತು..
ಮೊನ್ನೆ ಮೊನ್ನೆಯಷ್ಟೇ ತೋತಾಪುರಿ ಸಿನಿಮಾ ತಂಡ ಹಾಡಿನ ಟೀಸರ್ ಝಲಕ್ ತೋರಿಸಿ ಪ್ರೇಕ್ಷಕರಲ್ಲಿ ಕುತೂಹಲ ಬಿಲ್ಡ್ ಮಾಡಿತ್ತು. ಇದೀಗ ಪೂರ್ತಿ ವೀಡಿಯೋ ಹಾಡನ್ನೇ ಬಿಡುಗಡೆ ಮಾಡಿದೆ. ‘ಬಾಗ್ಲು ತೆಗಿ ಮೇರಿ ಜಾನ್’ ಎನ್ನುವ ಕ್ಯಾಚಿ ಲಿರಿಕ್ಸ್ ನ ಸಾಂಗ್, ಪ್ರೇಕ್ಷಕರನ್ನ ನೋಡಿಸಿಕೊಂಡು ಹೋಗುತ್ತಿದೆ. ಅದಿತಿ ಪ್ರಭುದೇವ ಮತ್ತು ಜಗ್ಗೇಶ್ ಕಾಂಬಿನೇಶನ್ ನೋಡುಗರಿಗೆ ಸಖತ್ ಥ್ರಿಲ್ ನೀಡುತ್ತಿದೆ. ವಿಜಯ ಪ್ರಸಾದ್ ಸಾಹಿತ್ಯಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಸಿಂಗರ್ ಅನನ್ಯ ಭಟ್, ವ್ಯಾಸರಾಜ್ ಸೋಸಲೆ, ಸುಪ್ರಿಯ ರಾಮ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಸದ್ಯ ಹಾಡು ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಂಡು ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿದೆ., ಬಿಡುಗಡೆಯಾದ 2 ದಿನಗಳಲ್ಲಿ ಗಂಟೆಗಳಲ್ಲಿ 20 ಲಕ್ಷಕ್ಕೂ ಹೆಚ್ಚು ವೀವ್ಸ್ ಕಂಡಿದೆ.
ಅಲಾ ವೈಕುಂಠ ಪುರಂಲೋ ಹಿಂದಿ ಡಬ್ಬಿಂಗ್ ವರ್ಷನ್ ರಿಲೀಸ್..!!!
2020ರ ಆರಂಭದಲ್ಲಿ ರಿಲೀಸ್ ಆಗಿದ್ದ ಅಲ್ಲು ಅರ್ಜುನ್ ಹಾಗೂ ಪೂಜಾ ಹೆಗಡೆ ನಟನೆಯ ಅಲಾ ವೈಕುಂಠಪುರಮುಲು ತೆಲುಗು ಸಿನಿಮಾ ಸೂಪರ್ ಹಿಟ್ ಆಗಿತ್ತು.. ಇದೀಗ ಹಿಂದಿ ಡಬ್ಬಿಂಗ್ ವರ್ಷನ್ ರಿಲೀಸ್ ಆಗಲಿದೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಈ ಚಿತ್ರದ ಹಿಂದಿ ಟ್ರೇಲರ್ ಅನ್ನು ನಿರ್ಮಾಕರು ಬಿಡುಗಡೆ ಮಾಡಿದ್ದಾರೆ. ಚಿತ್ರದ ಹಿಂದಿ ಆವೃತ್ತಿಯು ಫೆಬ್ರವರಿ 13 ರಂದು ಪ್ರೀಮಿಯರ್ ಆಗಲಿದೆ.ಹಾಗಂತ ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗ್ತಿಲ್ಲ… ಬದಲಾಗಿ ಟಿವಿ ಚಾನೆಲ್ ನಲ್ಲಿ ತೆರೆ ಬರುತ್ತಿದೆ. ಭಾರೀ ವಿವಾದಗಳ ನಂತರ ಬಿಡುಗಡೆ ದಿನಾಂಕವನ್ನು ನಿರ್ಧರಿಸಲಾಗಿದೆ. ಈ ಹಿಂದೆಯೇ ಚಿತ್ರದ ಬಿಡುಗಡೆಯನ್ನು ಕೈಬಿಡಲಾಗಿತ್ತು.
Allu arjun : ವಿವಾದದ ನಡುವೆಯೂ ರಿಲೀಸ್ ಆಗುತ್ತಿದೆ ಅಲಾ ವೈಕುಂಠಪುರಂಲೋ ಹಿಂದಿ ಡಬ್ಬಿಂಗ್..!!
ರಜನಿ ಪುತ್ರಿ ಐಶ್ವರ್ಯಗೆ ಕೋವಿಡ್ ಪಾಸಿಟಿವ್…!!
ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯಾ ಅವರಿಗೆ ಕೊರೊನಾ ಪಾಸಿಟಿವ್ ರುವುದು ದೃಢವಾಗಿದೆ.. ಕೊರೊನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಐಶ್ವರ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಅವರು ಇನ್ಸ್ಟಾಗ್ರಾಂ ಮೂಲಕ ಮಾಹಿತಿ ನೀಡಿದ್ದಾರೆ.. ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿಕೊಂಡಿರುವ ಅವರು, ಎಲ್ಲ ಮುನ್ನೆಚ್ಚರಿಕೆಗಳ ನಡುವೆಯೂ ನನಗೆ ಕೋವಿಡ್ ಪಾಸಿಟಿವ್ ಬಂದಿದ್ದು, ನಾವು ಆಸ್ಪತ್ರೆಗೆ ದಾಖಲಾಗಿದ್ದೇನೆ. ದಯಮಾಡಿ ನೀವೆಲ್ಲ ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಳ್ಳಿ, ಅವಶ್ಯವಾಗಿ ಲಸಿಕೆಯನ್ನು ಹಾಕಿಸಿಕೊಳ್ಳಿ ಸುರಕ್ಷಿತವಾಗಿರಿ ಎಂದು ಮನವಿ ಮಾಡಿದ್ದಾರೆ. ಜೊತೆಗೆ ತಾವು ಆಸ್ಪತ್ರೆಯಲ್ಲಿ ಫೋಟೋವನ್ನೂ ಕೂಡ ಹಂಚಿಕೊಂಡಿದ್ದಾರೆ..
ಮಾರ್ಚ್ 4 ತೆರೆಗೆ ಬರಲಿದೆ ಅಮಿತಾಬ್ ನಟನೆಯ ಝಂಡ್….
ಅಮಿತಾಬ್ ಬಚ್ಚನ್ ಅಭಿನಯದ ಬಹು ನಿರೀಕ್ಷಿತ ಚಿತ್ರದ ಬಿಡುಗಡೆ ದಿನಾಂಕವನ್ನು ಕೊನೆಗೂ ಪ್ರಕಟಿಸಲಾಗಿದೆ. ಮಾರ್ಚ್ 4 ರಂದು ‘ಝುಂಡ್’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕೋವಿಡ್-19 ಕಾರಣದಿಂದಾಗಿ ಹಲವು ಬಾರಿ ನಿರ್ಮಾಪಕರು ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಬೇಕಾಯಿತು. ಆದರೆ ಇದೀಗ ಅಭಿಮಾನಿಗಳ ಕಾಯುವಿಕೆ ಕೊನೆಗೊಂಡಿದೆ.
ಚಿತ್ರದ ಹೊಸ ಪೋಸ್ಟರ್ ಅನ್ನು ಹಂಚಿಕೊಂಡ ಅಮಿತಾಬ್ ಈ ಗುಂಪಿನೊಂದಿಗೆ ಸ್ಪರ್ಧಿಸಲು ಸಿದ್ಧರಾಗಿರಿ, ನಮ್ಮ ತಂಡವು ಬರುತ್ತಿದೆ… ‘ಝುಂಡ್’ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. ಎಂದು ಟ್ವೀಟ್ ಮಾಡಿದ್ದಾರೆ.