8 ರೈಲುಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತ Saaksha Tv
ನವದೆಹಲಿ: ವಿವಿಧ ಕಾರಣಗಳಿಂದ ದಕ್ಷಿಣ ಮಧ್ಯ ರೈಲ್ವೆಯ 8 ರೈಲುಗಳ ಸಂಚಾರವನ್ನು ತಾತ್ಕಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ಪ್ರಕಟಿಸಿದೆ.
ರೈಲು ಸಂಖ್ಯೆ 17435: ಫೆಬ್ರವರಿ 8 ಮತ್ತು ಫೆಬ್ರವರಿ 9 ರಂದು ಕಾಚಿಗುಡ-ಕರ್ನೂಲ್ ಸಿಟಿ ರೈಲನ್ನು ರದ್ದುಗೊಳಿಸುವುದಾಗಿ. 17436: ಫೆಬ್ರವರಿ 8 ಮತ್ತು 9 ರಂದು ಕರ್ನೂಲ್ ಸಿಟಿ-ಕಾಚಿಗುಡ ರೈಲನ್ನು ರದ್ದುಗೊಳಿಸಿದ್ದು, 07797: ಫೆಬ್ರವರಿ 7, 8 ಮತ್ತು 9 ರಂದು ಕಾಚಿಗುಡ-ರಾಯಚೂರು ಡಿಇಎಂಯು ರೈಲು, 07798: ಫೆಬ್ರವರಿ 7, 8 ಮತ್ತು 9 ರಂದು ರಾಯಚೂರು-ಕಾಚಿಗೂಡ ಡಿಇಎಂಯು ರೈಲನ್ನು ರದ್ದುಗೊಳಿಸಲಾಗಿದೆ.
07269: ಫೆಬ್ರವರಿ 6, 7, 8 ಮತ್ತು 9 ರಂದು ಗುಂಟೂರು-ಕಾಚಿಗುಡ DEMUರೈಲು, 07270: ಫೆಬ್ರವರಿ 7, 8, 9 ಮತ್ತು 10 ರಂದು ಕಾಚಿಗುಡ-ಗುಂಟೂರು, 07789: ಫೆಬ್ರವರಿ 7, 8 ಮತ್ತು 9 ರಂದು ಕಾಚಿಗುಡ-ಮಹಬೂಬ್ನಗರ, 07790: ಫೆಬ್ರವರಿ 7, 8 ಮತ್ತು 9 ರಂದು ಮಹಬೂಬ್ನಗರ-ಕಾಚಿಗುಡ ರೈಲುಗಳನ್ನು ರದ್ದುಗೊಳಿಸುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.









