IPL 2022 | ಕಳೆದ ವರ್ಷ 15 ಕೋಟಿ.. ಈಗ ನಾಪತ್ತೆ
ಕಳೆದ ವರ್ಷ ನಡೆದ ಐಪಿಎಲ್ ಹರಾಜಿನಲ್ಲಿ ದಾಖಲೆಯ ಬೆಲೆಗೆ ಆರ್ ಸಿಬಿಗೆ ಮಾರಾಟವಾಗಿದ್ದ ನ್ಯೂಜಿಲೆಂಡ್ ಸ್ಟಾರ್ ವೇಗಿ ಕೈಲ್ ಜೇಮಿಸನ್, ಈ ಬಾರಿಯ ಮೆಗಾ ಹರಾಜಿನಿಂದ ದೂರ ಉಳಿದಿದ್ದಾರೆ.
ಇದು ಸದ್ಯ ಚರ್ಚೆಗೆ ಗ್ರಾಸವಾಗಿದೆ. ಈ ಬಾರಿಯ ಐಪಿಎಲ್ ಮೆಗಾ ಹರಾಜಿಗಾಗಿ ನ್ಯೂಜಿಲೆಂಡ್ ನ ಒಟ್ಟು 24 ಮಂದಿ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಆದ್ರೆ ಈ ಪಟ್ಟಿಯಲ್ಲಿ ಕೈಲ್ ಜೇಮಿಸನ್ ಹೆಸರು ಮಿಸ್ ಆಗಿದೆ. ಕಳೆದ ವರ್ಷದ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೂ. 15 ಕೋಟಿಗೆ ಜೇಮ್ಸ್ ಅವರನ್ನ ಖರೀದಿಸಿತ್ತು.
ಆದಾಗ್ಯೂ ಕೈಲ್ ಆ ಋತುವಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ. ಹೀಗಾಗಿ RCB ಮೆಗಾ ಹರಾಜಿನ ಮೊದಲು ಅವರನ್ನು ಕೈಬಿಟ್ಟಿದೆ.
ಕಳೆದ ಋತುವಿನಲ್ಲಿ ಒಟ್ಟು 9 ಪಂದ್ಯಗಳನ್ನು ಆಡಿದ್ದ ಜೇಮ್ಸನ್ 28 ಓವರ್ ಎಸೆದು, 9 ವಿಕೆಟ್‌ಗಳನ್ನು ಕಬಳಿಸಿದ್ದರು.
ಅಂದಹಾಗೆ ಇತ್ತೀಚಿನ ದಿನಗಳಲ್ಲಿ ಜೇಮಿಸನ್ ಅತ್ಯುತ್ತಮ ಪ್ರದರ್ಶನ ನೀಡಿದರೂ ಐಪಿಎಲ್ ಹರಾಜಿನಲ್ಲಿ ಭಾಗವಹಿಸಿಲ್ಲ. ಇದಕ್ಕೆ ಬಯೋ ಬಬಲ್ ಕಾರಣ ಎಂದು ಹೇಳಲಾಗುತ್ತಿದೆ.
ಏತನ್ಮಧ್ಯೆ, ಐಪಿಎಲ್-2022 ಮೆಗಾ ಹರಾಜು ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ.









