Shashikala jolle | ಸಂಪುಟ ವಿಸ್ತರಣೆ ಬಗ್ಗೆ ನೋ ಕಮೆಂಟ್ಸ್ Shashikala jolle No comments on volume expansion saaksha tv
ಬೆಂಗಳೂರು : ಸಚಿವ ಸಂಪುಟದ ವಿಸ್ತರಣೆ ವಿಚಾರದಲ್ಲಿ ನಾನು ಏನೂ ಮಾತನಾಡುವುದಿಲ್ಲ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಕಸರತ್ತು ಮತ್ತೆ ಮುಂದುವರೆದಿದೆ.
ಸಚಿವಾಕಾಂಕ್ಷಿಗಳು ಸಂಪುಟ ವಿಸ್ತರಣೆ / ಪುನರ್ ರಚನೆ ಮಾಡಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ.
ಅಲ್ಲದೇ ಕೆಲ ಸಚಿವರು ತಮ್ಮ ಫೋನ್ ಕಾಲ್ ಗಳಿಗೆ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನಿತ ಶಾಸಕರು ಆರೋಪಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೊಲ್ಲೆ, ಮಂತ್ರಿ ಸ್ಥಾನದಿಂದ ಕೈ ಬಿಡೋದು ಮುಂದುವರಿಸೋದು ಸಿಎಂ ಹಾಗೂ ವರಿಷ್ಟರ ನಿರ್ಧಾರ.
ಕೆಲ ಸಚಿವರು ಸರಿಯಾಗಿ ಕೆಲಸ ಮಾಡ್ತಿಲ್ಲ ಅನ್ನೋದು ಕೆಲವರ ಅನುಭವ ಇರಬಹುದು ಅಷ್ಟೇ. ಆ ರೀತಿಯಲ್ಲಿ ಏನೂ ಆಗಿಲ್ಲ.
ಸಚಿವ ಸಂಪುಟದ ವಿಸ್ತರಣೆ ವಿಚಾರದಲ್ಲಿ ನಾನು ಏನೂ ಮಾತನಾಡುವುದಿಲ್ಲ ಎಂದಿದ್ದಾರೆ.









