ಹಾವನ್ನು ಉಳಿಸಲು ಹೋಗಿ ಪತ್ನಿಯ ದುರ್ಮರಣ Saaksha Tv
ಶಿವಮೊಗ್ಗ: ರಸ್ತೆಯಲ್ಲಿ ಅಡ್ಡ ಬಂದ ಹಾವನ್ನು ತಪ್ಪಿಸಲು ಹೋಗಿ ಕಾರು ನಾಲೆಗೆ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಗಾಜನೂರು ಗ್ರಾಮದ ಬಳಿ ನಡೆದಿದೆ.
ಸುಷ್ಮಾ ಮೃತ ಮಹಿಳೆ. ತಡರಾತ್ರಿ ಸುಷ್ಮಾ ಮತ್ತು ಪತಿ ಚೇತನ್, ಅವರ ತಾಯಿ ತುಮಕೂರಿನಲ್ಲಿದ್ದು, ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ ಅವರನ್ನು ನೋಡಲು ಪತ್ನಿ ಸುಷ್ಮಾ ಜೊತೆ ಚೇತನ್ ತಮ್ಮ ಇಂಡಿಕಾ ಕಾರಿನಲ್ಲಿ ಹೊರಟಿದ್ದಾರೆ. ಕಾರು ತುಂಗಾ ಎಡದಂಡೆ ಕಾಲುವೆ ಬಳಿ ಹೋಗುವಾಗ ರಸ್ತೆಗೆ ಹಾವೊಂದು ಅಡ್ಡ ಬಂದಿದೆ.
ಚೇತನ್ ಹಾವನ್ನು ತಪ್ಪಿಸಲು ಹೋಗಿ ಕಾರನ್ನು ಎಡಕ್ಕೆ ತಿರುಗಿಸಿದ್ದಾರೆ. ಈ ವೇಳೆ, ಕಾರು ಕಾಲುವೆಗೆ ಹೋಗಿದ್ದು, ಚೇತನ್ ಜೋರಾಗಿ ಕೂಗಿದ ಮೇಲೆ ಸ್ಥಳೀಯರು ಚಾಲಕನನ್ನು ಮೇಲಕ್ಕೆ ಎತ್ತಿದ್ದಾರೆ. ಸುಷ್ಮಾರನ್ನು ಮೇಲಕ್ಕೆ ಎತ್ತುವಷ್ಟರಲ್ಲಿಯೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ









