Amithab Bacchhan : ಐಶಾರಾಮಿ ಮನೆ ಮಾರಿದ ಅಮಿತಾಬ್ – ಗಳಿಸಿದ್ದೆಷ್ಟು…???
ಮುಂಬೈ : ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಈಗಲೂ ಅನೇಕ ಸಿನಿಮಾಗಳು , ಜಾಹಿರಾತುಗಳಲ್ಲಿ ಬ್ಯುಸಿಯಾಗಿದ್ದಾರೆ… ದಶಕಗಳಿಂದ ಸಿನಿಮಾರಂಗ ಆಳಿರುವ ಬಚ್ಚನ್ ಅಷ್ಟೇ ಆಸ್ತಿ ಮಾಡಿದ್ದಾರೆ.. ಮುಂಬೈ , ದೆಹಲಿ ಸೇರಿ ಅನೇಕ ಕಡೆಗಳಲ್ಲಿ ದುಬಾರಿ ಮನೆಗಳನ್ನ ಹೊಂದಿದ್ದಾರೆ..
ಇದೀಗ ಅಮಿತಾಬ್ ಬಚ್ಚನ್ ಅವರು ತಮ್ಮ ಐಶಾರಾಮಿ ಬಂಗಲೆಯೊಂದನ್ನ ಮಾರಾಟ ಮಾಡಿದ್ದಾರೆ.. ದಕ್ಷಿಣ ದೆಹಲಿಯ ಗುಲ್ಮೊಹರ್ ಪಾರ್ಕ್ ನಲ್ಲಿರುವ ತಮ್ಮ ಮನೆ ಮಾರಾಟ ಮಾಡಿದ್ದಾರೆ. ಈ ನಿವಾಸದ ಹೆಸರು ಸೋಪಾನ್.. ಈ ಮನೆಯ್ನ ಅಮಿತಾಬ್ ಬರೋಬ್ಬರಿ 23 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
ನೆಜೋನ್ ಗ್ರೂಪ್ ಆಫ್ ಕಂಪನಿಗಳ ಸಿಇಒ ಆಗಿರುವ ಅವ್ನಿ ಬೇಡರ್ ಅಮಿತಾಬ್ ಬಚ್ಚನ್ ಅವರ ಮನೆಯನ್ನು 23 ಕೋಟಿ ರೂಗಳಿಗೆ ಖರೀದಿಸಿದ್ದಾರೆ. ನಾವು ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದು, ನಾನು ಹೆಚ್ಚುವರಿ ಆಸ್ತಿಗಾಗಿ ದೆಹಲಿಯಲ್ಲಿ ಒಂದು ಮನೆಯನ್ನು ಹುಡುಕುತ್ತಿದ್ದೆ. ಆಗ ಅಮಿತಾಬ್ ಅವರ ಮನೆ ಮಾರಾಟಕ್ಕಿರುವುದು ತಿಳಿದುಬಂದಿದ್ದು, ತಕ್ಷಣ ಆ ಮನೆಯನ್ನು ಖರೀದಿಸಿದ್ದೇವೆ .
amithab bacchhan sold his luxurious bunglow
Samantha : ಡಿವೋರ್ಸ್ ಬಳಿಕ ಸಮಂತಾ ಮೊದಲ ಸಿನಿಮಾ ರಿಲೀಸ್…!!!
ಬಚ್ಚನ್ ಅವರು ಈ ಮನೆಯುನ್ನು ಕಟ್ಟಿಸಿ ತುಂಬಾ ವರ್ಷಗಳಾಗಿದ್ದು, ಇದು ಹಳೆಯ ನಿರ್ಮಾಣವಾಗಿದೆ. ಆದ್ದರಿಂದ ನಾವು ಸೋಪಾನ್ ಮನೆಯನ್ನು ಕೆಡವುತ್ತೇವೆ. ನಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಆ ಮನೆಯನ್ನು ಹೊಸದಾಗಿ ನಿರ್ಮಿಸುತ್ತೇವೆ ಎಂದು ಅವ್ನಿ ಅವರು ತಿಳಿಸಿದರು. ಈ ಹಿಂದೆ ಸೋಪಾನ್ ಮನೆಯಲ್ಲಿ ಅಮಿತಾಭ್ ಬಚ್ಚನ್ ಅವರ ತಂದೆ ಖ್ಯಾತ ಕವಿ ಹರಿವಂಶ್ ರಾಯ್ ಬಚ್ಚನ್ ಮತ್ತು ಅವರ ತಾಯಿ ದಿವಂಗತ ತೇಜಿ ಬಚ್ಚನ್ ವಾಸಿಸುತ್ತಿದ್ದರು. ಈ ಮನೆಯು 418.5 ಚದರ ಮೀಟರ್ ಜಾಗದಲ್ಲಿದೆ.









