ಪೃಥ್ವಿ ಶಾ.. ಸೆಹ್ವಾಗ್ ರಂತಹ ಆಟಗಾರ : ಕ್ಲಾರ್ಕ್ virender-sehwag prithvi-shaw michael-clarke
ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್, ಟೀಂ ಇಂಡಿಯಾ ಯಂಗ್ ಸ್ಟಾರ್ ಪೃಥ್ವಿ ಶಾ ಮೇಲೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ.
ಪೃಥ್ವಿ ಶಾ .. ಭಾರತದ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್ ಅವರಂತಹ ಶ್ರೇಷ್ಠ ಆಟಗಾರ.
ಹೀಗಾಗಿ ಭಾರತ ತಂಡ ಆಯ್ಕೆ ಸಮಿತಿ ಅವರ ಮೇಲೆ ನಂಬಿಕೆ ಇಟ್ಟು ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪೃಥ್ವಿ ಶಾ .. ಸೆಹ್ವಾಗ್ ಅವರಂತಹ ಶ್ರೇಷ್ಠ ಆಟಗಾರ. ಆತ ಕ್ರೀಸ್‌ನಲ್ಲಿದ್ದರೆ ಸ್ಕೋರ್‌ಬೋರ್ಡ್ ಓಡುತ್ತಲೇ ಇರುತ್ತದೆ.
ನನಗೆ ಸೆಹ್ವಾಗ್ ಅವರಂತಹ ಕ್ರಿಕೆಟಿಗರೆಂದರೇ ತುಂಬಾ ಇಷ್ಟ. ಪೃಥ್ವಿ ಶಾ ಕೂಡ ಸೆಹ್ವಾಗ್ ಅವರಂತೆ ಆಕ್ರಮಣಕಾರಿ ಬ್ಯಾಟ್ಸ್‌ಮನ್.
ಹೀಗಾಗಿ ಟೀಂ ಇಂಡಿಯಾ ಅವರನ್ನು ನಂಬಿ ಅವರಿಗೆ ಅವಕಾಶ ನೀಡಿದರೆ ಉತ್ತಮ.
ಅವರಿಗಿನ್ನೂ ಕೆರಿಯರ್ ಇದೆ. ಅವರಿಗೆ ಸ್ವಲ್ಪ ಸಮಯ ಬೇಕು. ಶಾ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೇವಲ ಒಂದು ಪಂದ್ಯವನ್ನು ಆಡಿದ್ದರು.
ಮೊದಲ ಪಂದ್ಯದಲ್ಲಿ ವಿಫಲವಾದ ಕಾರಣ ಅವರಿಗೆ ಮತ್ತೆ ಚಾನ್ಸ್ ನೀಡಲಿಲ್ಲ. ಆತ ಭಾರತ ತಂಡಕ್ಕೆ ಮರಳುವುದರಲ್ಲಿ ಸಂದೇಹವಿಲ್ಲ ಎಂದು ಕ್ಲಾರ್ಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.









