ಚೆನ್ನೈ : ಕೆಜಿಎಫ್ ಚಿತ್ರದ ಬಳಿಕ ದೇಶದೆಲ್ಲೆಡೆ ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಹವಾ ಜೋರಾಗಿ ಬೀಸುತ್ತಿದೆ. ರಾಖಿಭಾಯ್ ಗೆ ನಮ್ಮ ರಾಜ್ಯವಲ್ಲದೆ ಹೊರ ರಾಜ್ಯಗಳಲ್ಲೂ ಅಭಿಮಾನಿಗಳಿದ್ದಾರೆ. ಹೈದರಾಬಾದ್, ದೆಹಲಿ, ಮುಂಬೈ ಹೀಗೆ ಯಶ್ ಯಾವ ಭಾಗಕ್ಕೆ ಹೋದರೂ ಯಶ್ ಜೊತೆ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬೀಳುತ್ತಾರೆ. ಅದರಂತೆ ಇಂದು ಸತ್ಯಭಾಮ ಇನ್ ಸ್ಟಿಟ್ಯೂಟ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಯಶ್ ಚೆನ್ನೈಗೆ ಭೇಟಿ ನೀಡಿದ್ದರು. ಈ ವೇಳೆ ಏರ್ ಪೋರ್ಟ್ ಯಶ್ ಅವರನ್ನು ಕಂಡ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ಇದನ್ನು ಗಮನಿಸಿದ ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಸೆಲ್ಫಿಕೊಟ್ಟು ಆ ನಂತರ ಕಾರ್ಯಕ್ರಮಕ್ಕೆ ತೆರಳಿದರು.










