ದೇಶದಲ್ಲಿ ಹೊಸದಾಗಿ 1,49 ಲಕ್ಷ ಕೊರೊನಾ ಪ್ರಕರಣಗಳು ಪತ್ತೆ Saaksha Tv
ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1,49,394 ಲಕ್ಷ ಹೊಸದಾಗಿ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ವಾರದ ಏರಿಕೆ ಪ್ರಮಾಣವು 12.03 ರಷ್ಟಿದ್ದು, ದಿನದ ಏರಿಕೆ ಪ್ರಮಾಣವು 12.03 ರಷ್ಟಿದೆ. ಸಕ್ರಿಯ ಪ್ರಕರಣಗಳು 14,35,569 ಇದ್ದು, ಸಕ್ರಿಯ ಪ್ರಕರಣಗಳ ಪ್ರಮಾಣವು 3.42 ರಷ್ಟಿದೆ. ಕಳೆದ 24 ಗಂಟೆಯಲ್ಲಿ 2,46,674 ಜನರು ಚೇತರಿಸಿಕೊಂಡಿದ್ದು, ಚೇತರಿಕೆ ಪ್ರಮಾಣವು 95.39 ರಷ್ಟು ಏರಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1,072 ಜನರು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಯಲ್ಲಿ 16,11,666 ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ಈವರೆಗೆ ದೇಶದಲ್ಲಿ 168.67 ಕೋಟಿ ಕೊರೊನಾ ಲಸಿಕೆಗಳನ್ನು ನೀಡಲಾಗಿದೆ. ನಿನ್ನೆಗಿಂತ ಸೋಂಕಿತರ ಪ್ರಮಾಣವು ಶೇ 13 ರಷ್ಟು ಇಳಿಕೆಯಾಗಿದೆ ಎಂದು ಮಾಹಿತಿ ನೀಡಿದೆ.









